'ವಿಚ್ಛೇದನ' ಕುರಿತು ಮೋಹನ್ ಭಾಗವತ್ ಹೇಳಿಕೆ ವಿರುದ್ಧ ಸೋನಂ ಕಪೂರ್ ಆಕ್ರೋಶ

Update: 2020-02-17 08:09 GMT

ಮುಂಬೈ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು `ವಿವಾಹ ವಿಚ್ಛೇದನ' ಕುರಿತಂತೆ ನೀಡಿರುವ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಸೋನಂ ಕಪೂರ್ ಕಿಡಿಕಾರಿದ್ದಾರಲ್ಲದೆ ಈ ಕುರಿತಂತೆ ಟ್ವೀಟ್ ಮಾಡಿ ಭಾಗ್ವತ್ ಅವರ ಹೇಳಿಕೆ `ಪ್ರತಿಗಾಮಿ'ಯಾಗಿದೆ ಎಂದಿದ್ದಾರೆ.

ಫೆಬ್ರವರಿ 16ರಂದು  ಅಹ್ಮದಾಬಾದ್‍ನಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು  ಉದ್ದೇಶಿಸಿ ಮಾತನಾಡಿದ್ದ ಭಾಗವತ್, "ಶಿಕ್ಷಣ ಹಾಗೂ ಶ್ರೀಮಂತಿಕೆ ಅಹಂಕಾರವನ್ನೂ ತರುವುದರಿಂದ ಕುಟುಂಬಗಳು ದೂರವಾಗುತ್ತಿವೆ. `ಶಿಕ್ಷಿತ ಹಾಗೂ ಶ್ರೀಮಂತ' ಕುಟುಂಬಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿವೆ'' ಎಂದು ಹೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಸ್ಪಂದಿಸಿ ಟ್ವೀಟ್ ಮಾಡಿರುವ ಸೋನಂ ಕಪೂರ್ ``ಯಾವ ವಿವೇಕಿ ಮನುಷ್ಯ ಈ ರೀತಿ ಮಾತನಾಡಬಲ್ಲ ? ಪ್ರತಿಗಾಮಿ, ಮೂರ್ಖ ಹೇಳಿಕೆಗಳು'' ಎಂದು ಬರೆದಿದ್ದಾರಲ್ಲದೆ ಜತೆಗೆ ಭಾಗವತ್ ಹೇಳಿಕೆಯ ಸುದ್ದಿ ಪತ್ರಿಕೆಯ ಕ್ಲಿಪ್ಪಿಂಗ್ ಅನ್ನೂ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News