ಜಾಮಿಯಾ ಹಿಂಸಾಚಾರ: ಮತ್ತೆರೆಡು ವೀಡಿಯೊ ಬಿಡುಗಡೆ

Update: 2020-02-17 14:27 GMT

ಹೊಸದಿಲ್ಲಿ, ಫೆ. 17: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಒಳಗಡೆ ಡಿಸೆಂಬರ್ 15ರಂದು ಪೊಲೀಸರು ನುಗ್ಗಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವ ವೀಡಿಯೊ ಬಿಡುಗಡೆಯಾದ ಗಂಟೆಗಳ ಬಳಿಕ ಜನರು ತರಾತುರಿಯಿಂದ ವಿ.ವಿ. ಗ್ರಂಥಾಲಯದ ಒಳಗೆ ನುಗ್ಗುವ ಇನ್ನೆರೆಡು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಎರಡನೇ ವೀಡಿಯೊದಲ್ಲಿ ಕೆಲವು ಜನರು ಮುಖ ಮುಚ್ಚಿಕೊಂಡಿದ್ದರು. ಅವರು ಗ್ರಂಥಾಲಯ ಪ್ರವೇಶಿಸುತ್ತಿದ್ದಂತೆ ಒಳಗಿದ್ದವರು ಯಾರೂ ಒಳಗೆ ಪ್ರವೇಶಿಸದಂತೆ ಅಡ್ಡ ಇರಿಸಲು ಬಾಗಿಲಿನತ್ತ ಟೇಬಲ್ ಹಾಗೂ ಖುರ್ಚಿಗಳನ್ನು ಎಳೆಯುತ್ತಿರುವುದು ಕಂಡು ಬಂದಿದೆ. ಆದರೆ, ಇದರಲ್ಲಿ ಘಟನೆ ನಡೆದ ದಿನಾಂಕ ಹಾಗೂ ಸಮಯದ ವಿವರ ಇಲ್ಲ. ಈ ವೀಡಿಯೊ 5.25 ನಿಮಿಷಗಳಷ್ಟು ಇದೆ. ಮೂರನೇ ವೀಡಿಯೊ 2.13 ನಿಮಿಷ ಇದೆ. ಇದರಲ್ಲಿ ಹಜಾರದಲ್ಲಿ ಕೆಲವರು ಮುಖ ಮುಚ್ಚಿದ ವ್ಯಕ್ತಿಗಳು ಓಡಾಡುತ್ತಿರುವುದು ಕಂಡು ಬಂದಿದೆ. ಇವರಲ್ಲಿ ಕನಿಷ್ಠ ಇಬ್ಬರು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿದ್ದಾರೆ.

ಈ ವೀಡಿಯೊವನ್ನು ಡಿಸೆಂಬರ್ 15ರಂದು ಸಂಜೆ ಸುಮಾರು 6.04 ಗಂಟೆಗೆ ದಾಖಲಾಗಿದೆ. ಮೊದಲ ವೀಡಿಯೊವನ್ನು ಜಾಮಿಯಾ ಸಮನ್ವಯ ಸಮಿತಿ (ಜೆಸಿಸಿ) ಬಿಡುಗಡೆ ಮಾಡಿತ್ತು. ಆದರೆ, ಅನಂತರ ಈ ವೀಡಿಯೊವನ್ನು ತಾನು ಬಿಡುಗಡೆ ಮಾಡಿಲ್ಲ ಎಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ ಸಮರ್ಥನೆ ನೀಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News