×
Ad

ಗಾಯದಿಂದ ಚೇತರಿಸಿಕೊಂಡ ಸಾನಿಯಾ, ದುಬೆ ಓಪನ್‌ಗೆ ಲಭ್ಯ

Update: 2020-02-17 23:49 IST

ದುಬೈ, ಫೆ.17: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ವೇಳೆ ಕಾಣಿಸಿಕೊಂಡಿದ್ದ ಕಾಲುನೋವಿನಿಂದ ಚೇತರಿಸಿ ಕೊಂಡಿದ್ದು, ದುಬೈ ಓಪನ್‌ಗೆ ಲಭ್ಯವಿರಲಿದ್ದಾರೆ. 33ರ ಹರೆಯದ ಸಾನಿಯಾ ಫ್ರಾನ್ಸ್ ನ ಜೊತೆಗಾರ್ತಿ ಕರೊಲಿನ್ ಗಾರ್ಸಿಯಾ ಅವರೊಂದಿಗೆ ಬುಧವಾರ ನಡೆಯಲಿರುವ ದುಬೈ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ರಶ್ಯದ ಅಲ್ಲ ಕುಡ್ರಾಸೇವಾ ಹಾಗೂ ಸ್ಲೋವಾನಿಯದ ಕಟರಿನಾ ಸ್ರೆಬೊಟ್ನಿಕ್‌ರನ್ನು ಎದುರಿಸಲಿದ್ದಾರೆ.

‘‘ಗಾಯದ ಸಮಸ್ಯೆಯಿಂದಾಗಿ ಗ್ರಾನ್‌ಸ್ಲಾಮ್ ಟೂರ್ನಿಯನ್ನು ತ್ಯಜಿಸಿರುವುದು ಒಂದು ದುಃಖಕರ ಅನುಭವ. ದೀರ್ಘ ವಿರಾಮದ ಬಳಿಕ ಪಂದ್ಯಕ್ಕೆ ವಾಪಸಾದ ಸಂದರ್ಭದಲ್ಲಿ ಹೀಗಾದರೆ ಮನಸ್ಸಿಗೆ ಘಾಸಿಯಾಗುತ್ತದೆ. ಡಾ.ಫೈಸಲ್ ಖಾನ್ ನಾನು ಟೂರ್ನಮೆಂಟ್‌ನಲ್ಲಿ ಫಿಟ್ ಆಗುವಂತೆ ಮಾಡಿದ್ದಾರೆ. ನಾನು ಪ್ರಾಕ್ಟೀಸ್ ಆರಂಭಿಸಿದ್ದೇನೆ. ಉತ್ತಮ ಟೂರ್ನಮೆಂಟ್‌ಗಾಗಿ ಎದುರು ನೋಡುತ್ತಿರುವೆ’’ ಎಂದು ಸಾನಿಯಾ ಹೇಳಿದ್ದಾರೆ. 2 ವರ್ಷಗಳ ವಿರಾಮದ ಬಳಿಕ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದ ಸಾನಿಯಾ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಆಡುತ್ತಿದ್ದಾಗಲೇ ಗಾಯಗೊಂಡು ಪಂದ್ಯವನ್ನು ತೊರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News