ಕುದ್ರೋಳಿ: ಫೆ.19ರಂದು ಎಸ್ಕೆಎಸ್ಸೆಸ್ಸೆಫ್ ಸ್ಥಾಪನೆ ದಿನಾಚರಣೆ

Update: 2020-02-18 07:27 GMT

ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ಸ್ಥಾಪನೆ ದಿನದ ಪ್ರಯುಕ್ತ ಫೆ.19 ರಂದು ಬೆಳಗ್ಗೆ 6.45ಕ್ಕೆ ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆ ಇದರ ವತಿ ಯಿಂದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ತಹ್ಲೀಲ್ ಸಮರ್ಪಣೆ ನಡುಪಳ್ಳಿ ಜುಮಾ ಮಸೀದಿ ಕುದ್ರೋಳಿ ವಠಾರದಲ್ಲಿ ನಡೆಯಲಿದೆ.

ನಡುಪಳ್ಳಿ ಜುಮಾ ಮಸೀದಿ ಖತೀಬ್ ರಿಯಾಝ್ ಫೈಝಿ ನೇತೃತ್ವ ವಹಿಸಲಿದ್ದಾರೆ. ಬಿ ಎ ಇಸ್ಮಾಯಿಲ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಡುಪಳ್ಳಿ ಜುಮಾ ಮಸೀದಿಯ ಅಧ್ಯಕ್ಷರಾದ ಫಝಲ್ ಮುಹಮ್ಮದ್ ಮತ್ತು ಸ್ಥಳೀಯ ಕಾರ್ಪೊರೇಟರ್ ಶಂಸುದ್ದೀನ್ ಕುದ್ರೋಳಿ ಹಾಗೂ ಇನ್ನಿತರ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News