ಕಂದಾಯ, ಬ್ಯಾಂಕ್ ದಾಖಲೆಗಳು ಪೌರತ್ವ ಸಾಬೀತು ಪಡಿಸಲು ಪುರಾವೆಯಾಗುವುದಿಲ್ಲ : ಅಸ್ಸಾಂ ಹೈಕೋರ್ಟ್

Update: 2020-02-18 10:56 GMT

ಗುವಹಾಟಿ : ಪೌರತ್ವ ಸಾಬೀತು ಪಡಿಸಲು ಕಂದಾಯ ಪಾವತಿ ರಶೀದಿಗಳು, ಬ್ಯಾಂಕ್ ಸ್ಟೇಟ್‍ಮೆಂಟ್‍ಗಳು ಹಾಗೂ ಪ್ಯಾನ್ ಕಾರ್ಡ್‍ಗಳನ್ನು  ಪುರಾವೆಯಾಗಿ ಬಳಸಲು ಸಾಧ್ಯವಿಲ್ಲ ಎಂದು ಗುವಹಾಟಿ ಹೈಕೋರ್ಟ್ ಹೇಳಿದೆ.

ತನ್ನನ್ನು 'ವಿದೇಶೀಯಳು' ಎಂದು ಪರಿಗಣಿಸಿದ ಟ್ರಿಬ್ಯುನಲ್ ಆದೇಶದ ವಿರುದ್ಧ ಝುಬೈದಾ ಬೇಗಂ ಎಂಬವರು ಸಲ್ಲಿಸಿದ್ದ ಅಪೀಲನ್ನು ತಿರಸ್ಕರಿಸುವ ವೇಳೆ ಹೈಕೋರ್ಟ್ ಮೇಲಿನಂತೆ ತಿಳಿಸಿದೆ. ಆದರೆ ಅಸ್ಸಾಂನಲ್ಲಿ ಎನ್‍ಆರ್ ಸಿ ಪ್ರಕ್ರಿಯೆಯ ವೇಳೆ ಅಧಿಕಾರಿಗಳು  ಪಡೆಯುತ್ತಿದ್ದ ದಾಖಲೆಗಳಲ್ಲಿ ಭೂ ಮತ್ತು ಬ್ಯಾಂಕ್ ದಾಖಲೆಗಳೂ ಸೇರಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಗ್ರಾಮದ ಮುಖ್ಯಸ್ಥೆ ತನ್ನ ತಂದೆ ಹಾಗೂ ಪತಿಯ ಗುರುತನ್ನು ದೃಢೀಕರಿಸಿ ನೀಡಿದ ಪ್ರಮಾಣಪತ್ರ ಸಹಿತ ಆಕೆ ವಿದೇಶೀಯರ ಟ್ರಿಬ್ಯುನಲ್‍ಗೆ 14 ದಾಖಲೆಗಳನ್ನು ನೀಡಿದ್ದರೂ ಆಕೆ ತನ್ನ ಹೆತ್ತವರ ಜತೆಗಿನ ನಂಟನ್ನು ದೃಢೀಕರಿಸುವ ದಾಖಲೆ ನೀಡಲು ವಿಫಲಳಾಗಿದ್ದರಿಂದ ಆಕೆಯನ್ನು ವಿದೇಶೀಯಳು ಎಂದು ಟ್ರಿಬ್ಯುನಲ್ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News