ಮಂಗಳೂರು: ಕೊಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ

Update: 2020-02-18 17:46 GMT

ಮಂಗಳೂರು, ಫೆ.18: ದ.ಕ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ನಡೆದ ಕಾರ್ಯಾಚರಣೆಯಲ್ಲಿ ಕೊಟ್ಪಾ-2003 ಕಾಯ್ದೆ ಉಲ್ಲಂಘಿಸಿ ದವರ ವಿರುದ್ಧ 24 ಕೇಸುಗಳನ್ನು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.

ದ.ಕ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅನುಷ್ಠಾಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ನೇತೃತ್ವದ ತಂಡವು ನಗರದ ಅತ್ತಾವರ, ಕಂಕನಾಡಿ, ಪಾಂಡೇಶ್ವರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು.

ಕೊಟ್ಪಾ ಕಾಯ್ದೆಯ ಸೆಕ್ಷನ್ 4 ಹಾಗೂ 6ಬಿ ಪ್ರಕಾರ 24 ಪ್ರಕರಣಗಳನ್ನು ದಾಖಲಿಸಲಾಗಿದೆ. 1,800 ರೂ. ದಂಡ ವಿಧಿಸಿ, ಕಾಯ್ದೆ ಕುರಿತು ಅಂಗಡಿ, ಹೊಟೇಲ್ ಮಾಲಕರಲ್ಲಿ ಜಾಗೃತಿ ಮೂಡಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಇದರ ಉಲ್ಲಂಘನೆ ನಡೆದಲ್ಲಿ ಕಠಿಣ ಕ್ರಮ ಕೈಗೊಳ್ಳುವು ದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಕಾರ್ಯಾಚರಣೆಯಲ್ಲಿ ಸಮಾಜ ಕಾರ್ಯಕರ್ತೆ ಶ್ರುತಿ ಸಾಲ್ಯಾನ್, ಹಿರಿಯ ಆರೋಗ್ಯ ಸಹಾಯಕ ರುದ್ರೇಶ್, ಪೊಲೀಸ್ ಸಿಬ್ಬಂದಿ ರವಿಕುಮಾರ್ ಹಾಗೂ ವಿದ್ಯಾ ಉಪಸ್ಥಿತರಿದ್ದರು.

ಯಾವುದೆಲ್ಲ ಉಲ್ಲಂಘನೆ ?

* ಬೀಡಿ, ಸಿಗರೇಟ್‌ನ್ನು ಬಿಡಿಬಿಡಿಯಾಗಿ ಮಾರುವಂತಿಲ್ಲ
* ಸಾರ್ವಜನಿಕ ಸ್ಥಳ, ಪಾನ್‌ಶಾಪ್‌ನಲ್ಲಿ ಬಳಿ ಧೂಮಪಾನ ನಿಷಿದ್ಧ
* ಶಾಲೆಯ 100 ಮೀ. ಅಂತರದಲ್ಲಿ ತಂಬಾಕು ಉತ್ಪನ್ನ ಮಾರುವಂತಿಲ್ಲ
* ಕೊಟ್ಪಾ ಉಲ್ಲಂಘಿಸುವ ವಿದೇಶಿ ಸಿಗರೇಟ್ ಮಾರಾಟ ನಿಷಿದ್ಧ
* ಪಾನ್‌ಶಾಪ್ ಬಳಿ ಲೈಟರ್, ಬೆಂಕಿಪೊಟ್ಟಣ ಇಡುವಂತಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News