ನಕಲು ಮಾಡುವುದು ಹೇಗೆಂದು ತಿಳಿಸಿದ ಶಾಲಾ ಪ್ರಾಂಶುಪಾಲನ ಬಂಧನ

Update: 2020-02-20 14:16 GMT
ಸಾಂದರ್ಭಿಕ ಚಿತ್ರ

ಲಕ್ನೋ, ಫೆ. 20: ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆಯಲ್ಲಿ ನಕಲು ಮಾಡುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ನೀಡಿದ ಸೂಚನೆಗಳ ವೀಡಿಯೊ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆದ ಬಳಿಕ ಉತ್ತರಪ್ರದೇಶದ ಮಾವು ಜಿಲ್ಲೆಯ ಶಾಲೆಯ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆ ರಾಜ್ಯಾದ್ಯಂತ ಮಂಗಳವಾರ ಆರಂಭವಾಗಲಿದೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರೀಕ್ಷೆಯಲ್ಲಿ ನಕಲು ಮಾಡುವುದು ಹೇಗೆ ಎಂಬ ಬಗ್ಗೆ ಮಾತನಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಮಾಹು ಜಿಲ್ಲೆಯ ಖಾಸಗಿ ಶಾಲೆಯ ಪ್ರಾಂಶುಪಾಲ ಹಾಗೂ ಮ್ಯಾನೇಜರ್ ಅವರನ್ನು ಬಂಧಿಸಲಾಗಿದೆ.

“ ಒಂದು ವೇಳೆ ನಿಮ್ಮಲ್ಲಿದ್ದ ಚೀಟಿಗಳು ಯಾರ ಕೈಗಾದರೂ ಸಿಕ್ಕದ ಸಂದರ್ಭ ಕೂಡ ಶಿಸ್ತು ಪಾಲಿಸಿ” ಎಂದು ಮಾಲ್ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಈ ವೀಡಿಯೊವನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅವರ ದೂರು ನೀಡುವ ಪೋರ್ಟಲ್‌ನಲ್ಲಿ ವಿದ್ಯಾರ್ಥಿಯೋರ್ವ ಅಪ್‌ಲೋಡ್ ಮಾಡಿದ್ದ. ‘‘ನೀವು ಯಾರೊಬ್ಬರ ಕೈಯನ್ನು ಮುಟ್ಟಬೇಡಿ. ಪರಸ್ಪರ ಮಾತನಾಡಿಕೊಳ್ಳಿ. ಅದು ಉತ್ತಮ. ಯಾವುದೇ ಕಾರಣಕ್ಕೆ ಭೀತರಾಗಬೇಡಿ. ನಿಮ್ಮ ಸರಕಾರಿ ಶಾಲೆಯಲ್ಲಿರುವ ಅಧ್ಯಾಪಕರು ನನ್ನ ಸ್ನೇಹಿತರು. ಒಂದು ವೇಳೆ ನೀವು ಸಿಕ್ಕಿ ಬಿದ್ದರೆ ಅವರು ನಿಮ್ಮ ಕಪಾಳಕ್ಕೆ ಬಾರಿಸಬಹುದು. ಆದರೆ, ಭೀತರಾಗಬೇಡಿ. ಅದನ್ನು ಸಹಿಸಿಕೊಳ್ಳಿ’’ ಎಂದು ಮಾಲ್ ಹೇಳುವುದು ವೀಡಿಯೊದಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News