ನ್ಯೂಝಿಲೆಂಡ್ ವಿರುದ್ಧ ಮೊದಲ ಟೆಸ್ಟ್ : ಸಂಕಷ್ಟದಲ್ಲಿ ಭಾರತ
Update: 2020-02-21 09:28 IST
ವೆಲ್ಲಿಂಗ್ಟನ್: ಪ್ರವಾಸಿ ಭಾರತ ತಂಡದ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿ ಆತ್ಮವಿಶ್ವಾಸದಿಂದ ಇರುವ ನ್ಯೂಝಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಕೂಡಾ ಆರಂಭದ ದಿನವೇ ಭಾರತಕ್ಕೆ ಬಲವಾದ ಹೊಡೆತ ನೀಡಿದೆ.
ನಾಯಕ ವಿರಾಟ್ ಕೊಹ್ಲಿ (2) ಸೇರಿದಂತೆ ತಂಡದ ಪ್ರಮುಖ ನಾಲ್ವರು ಅಗ್ರಗಣ್ಯ ಆಟಗಾರರನ್ನು ಕಳೆದುಕೊಂಡಿರುವ ಭಾರತ ತೀವ್ರ ಒತ್ತಡಕ್ಕ ಸಿಲುಕಿದೆ. ಇತ್ತೀಚಿನ ವರದಿಗಳು ಬಂದಾಗ ಭಾರತ 4 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತ್ತು.
ಪೃಥ್ವಿ ಶಾ (16), ಮಾಯಾಂಕ್ ಅಗರ್‌ವಾಲ್ (4) ಮತ್ತು ಚೇತೇಶ್ವರ ಪೂಜಾರ (11) ಅವರ ವಿಕೆಟ್ ಕಳೆದುಕೊಂಡಿರುವ ಭಾರತಕ್ಕೆ ಅಜಿಂಕ್ಯಾ ರಹಾನೆ (28 ನಾಟೌಟ್) ಮತ್ತು ಹನುಮ ವಿಹಾರಿ (6 ನಾಟೌಟ್) ಆಸರೆಯಾಗಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ನ್ಯೂಜಿಲೆಂಡ್ ಬೌಲರ್‌ಗಳಾ ಸೌತಿ (1), ಟ್ರೆಂಟ್ ಬೋಲ್ಟ್ (1) ಮತ್ತು ಕೈಲ್ ಜೆಮಿಸನ್ (2) ಭಾರತಕ್ಕೆ ಆರಂಭಿಕ ಆಘಾತ ನೀಡಿದರು.