ಎಲ್ಲ 3 ಮಾದರಿ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನಾಡಿ ಇತಿಹಾಸ ನಿರ್ಮಿಸಿದ ಟೇಲರ್

Update: 2020-02-21 05:53 GMT

ಹೊಸದಿಲ್ಲಿ, ಫೆ.21: ನ್ಯೂಝಿಲ್ಯಾಂಡ್‌ನ ಹಿರಿಯ ಬ್ಯಾಟ್ಸ್‌ಮನ್ ರಾಸ್ ಟೇಲರ್ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 100 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

 ವೆಲ್ಲಿಂಗ್ಟನ್‌ನಲ್ಲಿ ಶುಕ್ರವಾರ ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಲು ಮೈದಾನಕ್ಕೆ ಇಳಿದ ಟೇಲರ್ ನ್ಯೂಝಿಲ್ಯಾಂಡ್‌ನ ಪರ 100ನೇ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡರು. ಟೇಲರ್ ಟೆಸ್ಟ್ ಹಾಗೂ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ 40ಕ್ಕೂ ಅಧಿಕ ಶತಕಗಳನ್ನು ಸಿಡಿಸಿದ್ದಲ್ಲದೆ, ಗರಿಷ್ಠ ರನ್ ಸ್ಕೋರರ್ ಕೂಡ ಆಗಿದ್ದಾರೆ.

100ನೇ ಟೆಸ್ಟ್ ಪಂದ್ಯವನ್ನಾಡಿದ ಟೇಲರ್ ಮೊದಲ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಕೈಲ್ ಜಮೀಸನ್ ಎಸೆತದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ(2)ನೀಡಿದ್ದ ಕ್ಯಾಚ್‌ನ್ನು ಪಡೆದರು. ಚೊಚ್ಚಲ ಪಂದ್ಯವನ್ನಾಡಿದ ಜಮೀಸನ್ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ವಿಕೆಟನ್ನು ಪಡೆದಿದ್ದಾರೆ.

ಟೇಲರ್ ಕಳೆದ ತಿಂಗಳು ಭಾರತ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 100ನೇ ಪಂದ್ಯವನ್ನು ಆಡಿದ್ದರು. ಕಿವೀಸ್‌ನ ಪರವಾಗಿ 231 ಏಕದಿನ ಪಂದ್ಯಗಳಲ್ಲಿ ಟೇಲರ್ ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News