ವಿನೇಶ್‌ಗೆ ಕಂಚು, ಸಾಕ್ಷಿಗೆ ಬೆಳ್ಳಿ

Update: 2020-02-21 18:09 GMT

ಹೊಸದಿಲ್ಲಿ, ಫೆ.21: ಭಾರತೀಯ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಹಾಗೂ ಅನ್ಶು ಮಲಿಕ್ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ತಮಗೆ ಸಂಬಂಧಿಸಿದ ತೂಕದ ವಿಭಾಗಗಳಲ್ಲಿ ಕಂಚಿನ ಪದಕ ಜಯಿಸಿದರು. ಫೈನಲ್‌ನಲ್ಲಿ ಸೋಲನುಭವಿಸಿದ ಸಾಕ್ಷಿ ಮಲಿಕ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 3 ಕಂಚು ಹಾಗೂ ಒಂದು ಬೆಳ್ಳಿ ಗೆಲ್ಲಲು ಸಮರ್ಥವಾಯಿತು. ಗುರುವಾರ 3 ಚಿನ್ನ ಹಾಗೂ ಒಂದು ಬೆಳ್ಳಿ ಜಯಿಸಿತ್ತು. 53 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ವಿನೇಶ್ ವಿಯೆಟ್ನಾಂನ ಥಿ ಲಿ ಕೀಯುರನ್ನು 10-0 ಅಂತರದಿಂದ ಮಣಿಸಿದರು. ಅನ್ಶು ಉಜ್ಬೇಕಿಸ್ತಾನದ ಸೆವಾರ ಎಶ್ಮುರಾಟೊವಾರನ್ನು ಸದೆಬಡಿದು ಕಂಚಿನ ಪದಕ ತನ್ನದಾಗಿಸಿಕೊಂಡರು.

ವಿನೇಶ್ ಇದಕ್ಕೂ ಮೊದಲು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಎದುರಾಳಿ ಮಯು ಮುಯಕಿಡಾ ವಿರುದ್ಧ 2-6ರಿಂದ ಸೋಲನುಭವಿಸಿ ಚಿನ್ನದ ಪದಕದ ರೇಸ್‌ನಿಂದ ಹೊರಗುಳಿದರು. 65 ಕೆಜಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಸಾಕ್ಷಿ ಮಲಿಕ್ ಜಪಾನ್‌ನ ನವೊಮಿ ರುಕೆ ವಿರುದ್ಧ 0-2 ಅಂತರದಿಂದ ಸೋಲನುಭವಿಸಿ 2ನೇ ಸ್ಥಾನ ಪಡೆದರು. 72 ಕೆಜಿ ವಿಭಾಗದಲ್ಲಿ ಗುರುಶರಣ್ ಪ್ರೀತ್ ಕೌರ್ ಕಂಚಿನ ಪದಕ ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News