ಹಂಗೇರಿಯನ್ ಓಪನ್: ಮಣಿಕಾ, ಸತ್ಯನ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2020-02-21 18:28 GMT

ಬುಡಾಪೆಸ್ಟ್, ಫೆ.21: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮಣಿಕಾ ಬಾತ್ರಾ ವಿಶ್ವದ ನಂ.26ನೇ ಆಟಗಾರ್ತಿ ಚೆನ್ ಝು-ಯು ಅವರನ್ನು ಮಣಿಸಿ ಐಟಿಟಿಎಫ್ ವರ್ಲ್ಡ್ ಟೂರ್ ಹಂಗೇರಿಯನ್ ಓಪನ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಇದೇ ವೇಳೆ, ಭಾರತದ ನಂ.1 ಆಟಗಾರ ಗುಣೇಶ್ವರನ್ ಸತ್ಯನ್ ಪುರುಷರ ಸಿಂಗಲ್ಸ್‌ನಲ್ಲಿ ಇರಾನ್‌ನ ನೌಶಾದ್‌ರನ್ನು 4-0(11-6, 11-6, 11-9, 11-2)ಅಂತರದಿಂದ ಮಣಿಸಿ ಪ್ರಿ-ಕ್ವಾರ್ಟರ್ ತಲುಪಿದರು. 24ರ ಹರೆಯದ ಮಣಿಕಾ ತನಗಿಂತ ಗರಿಷ್ಠ ರ್ಯಾಂಕಿನ ಆಟಗಾರ್ತಿ ಚೆನ್‌ರನ್ನು 4-3(9-11, 4-11,7-11, 12-10, 11-9, 11-7, 14-12)ಅಂತರದಿಂದ ರೋಚಕವಾಗಿ ಮಣಿಸಿದರು. ಐಟಿಟಿಎಫ್ ವರ್ಲ್ಡ್ ರ್ಯಾಂಕಿಂಗ್‌ನಲ್ಲಿ 67ನೇ ಸ್ಥಾನದಲ್ಲಿರುವ ಮಣಿಕಾ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.11ನೇ ಆಟಗಾರ್ತಿ ಹಿರೊನಾ ಮಿಯು ಅವರನ್ನು ಎದುರಿಸಲಿದ್ದಾರೆ. ಸತ್ಯನ್ ಅವರು ವಿಶ್ವದ ನಂ.5ನೇ ರ್ಯಾಂಕಿನ ಜಪಾನ್ ಆಟಗಾರ ಹರಿಮೊಟೊ ಟೊಮೊಕಾಝು ಅವರ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News