ಗೂನಡ್ಕ ಅಲ್ ಅಮೀನ್ 8ನೇ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ

Update: 2020-02-22 07:43 GMT

ಗೂನಡ್ಕ: ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ಗೂನಡ್ಕ ಇದರ 8ನೇ ವಾರ್ಷಿಕ ಮಹಾಸಭೆಯು ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಅಧ್ಯಕ್ಷತೆ ವಹಿಸಿ, ಸ್ಥಳೀಯ ಖತೀಬ್ ಮುಹಮ್ಮದಲೀ ಸಖಾಫಿ ಉದ್ಘಾಟಿಸಿದರು.

ಅಲ್ ಅಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹೀಂ ಕೊಪ್ಪತ್ತಕಜೆ ಪ್ರಸಕ್ತ ಸಾಲಿನ ವರದಿ ವಾಚಿಸಿ, ಕೋಶಾಧಿಕಾರಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಲೆಕ್ಕ ಪತ್ರ ಮಂಡಿಸಿದರು.

ಅನಾಥ -ನಿರ್ಗತಿಕ ಕುಟುಂಬದ ಯುವತಿಯರಿಗೆ ವಿವಾಹ ಕಾರ್ಯಕ್ಕೆ ವಿಶೇಷ ಯೋಜನೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೂನಡ್ಕ ಬದ್ರಿಯಾ ಜುಮಾ ಮಸೀದಿ ಸಲಹಾ ಸಮಿತಿ ಸದಸ್ಯರಾದ ಡಾ. ಉಮ್ಮರ್ ಬೀಜದಕಟ್ಟೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಆಯ್ಕೆಯಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಎಸ್ ಎಸ್ ಎಫ್ ಗೂನಡ್ಕ ಯುನಿಟ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಸೈನಾರ್ ಏ. ಟಿ ದೊಡ್ಡಡ್ಕ ಇವರನ್ನು ಸನ್ಮಾನಿಸಲಾಯಿತು.

ಜಮಾಅತ್ ಪ್ರಧಾನ ಕಾರ್ಯದರ್ಶಿ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿ ಕೆ ಅಬೂಸಾಲಿ, ಮುಅಲ್ಲಿಂ ಹಬೀಬ್ ಹಿಮಮಿ, ಸಂಸ್ಥೆಯ ಉಪಾಧ್ಯಕ್ಷ ಸಿ ಎಂ ಅಬ್ದುಲ್ಲ, ಜಮಾಅತ್ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ಲ ಕೊಪ್ಪತ್ತಕಜೆ, ಎಸ್ ವೈ ಎಸ್ ಮಾಜಿ ಅಧ್ಯಕ್ಷ ಎಸ್ ಎಂ ಅಬ್ದುಲ್ಲ,ಸೂಫಿ ದರ್ಖಾಸ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯದರ್ಶಿ ಜಿ ಎಂ ಅಬ್ದುಲ್ಲ ವಂದಿಸಿ, ಇಜಾಝ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News