ಸುಭಾಶ್ಚಂದ್ರ ಬೋಸ್ ಅಣ್ಣನ ಸೊಸೆ ಮಾಜಿ ಸಂಸದೆ ಕೃಷ್ಣಾ ಬೋಸ್ ನಿಧನ

Update: 2020-02-22 12:56 GMT
ಫೈಲ್ ಚಿತ್ರ

ಕೋಲ್ಕತಾ, ಫೆ.22: ಸ್ವಾತಂತ್ರ ಹೋರಾಟಗಾರ ಸುಭಾಶ್ಚಂದ್ರ ಬೋಸ್ ಅವರ ಅಣ್ಣನ ಸೊಸೆ, ಮಾಜಿ ಸಂಸದೆ ಕೃಷ್ಣಾ ಬೋಸ್ ಶನಿವಾರ ಕೋಲ್ಕತಾದಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ 89 ವರ್ಷದ ಕೃಷ್ಣಾ ಬೋಸ್‌ರನ್ನು ಕೋಲ್ಕತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ 10:20ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

 ಕೋಲ್ಕತಾದ ಸಿಟಿ ಕಾಲೇಜಿನಲ್ಲಿ 40 ವರ್ಷ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ಕೃಷ್ಣಾ ದಾಸ್ ಬಳಿಕ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದರು. ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ನೇತಾಜಿ ರಿಸರ್ಚ್ ಬ್ಯೂರೊದ ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಬೋಸ್ ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News