ಕೊರೋನ ವೈರಸ್: ರೋಗ ಲಕ್ಷಣಗಳಿಲ್ಲದೆಯೇ ಸಂಬಂಧಿಗಳಿಗೆ ರೋಗ ಹರಡಿದ ಮಹಿಳೆ

Update: 2020-02-22 14:48 GMT
file photo

ಬೀಜಿಂಗ್, ಫೆ. 22: ಚೀನಾದ ಕೊರೋನವೈರಸ್ ಸೋಂಕಿನ ಕೇಂದ್ರಬಿಂದು ವುಹಾನ್ ನಗರದ 20 ವರ್ಷದ ಮಹಿಳೆಯೊಬ್ಬರು 675 ಕಿ.ಮೀ. ದೂರದ ಅನ್ಯಂಗ್ ಎಂಬ ನಗರಕ್ಕೆ ಹೋಗಿ ಅಲ್ಲಿ ತನ್ನ ಐವರು ಸಂಬಂಧಿಕರಿಗೆ ಕೊರೋನವೈರಸ್ ಸೋಂಕು ಹರಡಿದ್ದಾರೆ. ಆದರೆ, ಆಶ್ಚರ್ಯವೆಂದರೆ ತನ್ನಲ್ಲಿ ರೋಗ ಇರುವ ಯಾವುದೇ ಲಕ್ಷಣಗಳನ್ನು ಅವರು ತೋರ್ಪಡಿಸಿಲ್ಲ.

ಸೋಂಕು ಯಾವುದೇ ಲಕ್ಷಣಗಳನ್ನು ತೋರಿಸದೆಯೇ ಸ್ವಯಂಚಾಲಿತವಾಗಿ ಹರಡಬಹುದು ಎನ್ನುವುದನ್ನು ಈ ಪ್ರಕರಣ ತೋರಿಸಿದೆ ಎಂದು ವಿಜ್ಞಾನಿಗಳು ಶುಕ್ರವಾರ ತಿಳಿಸಿದ್ದಾರೆ.

ಕೊರೋನವೈರಸ್ ಹೇಗೆ ಹರಡುತ್ತಿದೆ ಹಾಗೂ ಹರಡುವಿಕೆಯನ್ನು ತಡೆಯುವುದು ಯಾಕೆ ಕಷ್ಟವಾಗಬಹುದು ಎಂಬ ಬಗ್ಗೆ ‘ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್’ನಲ್ಲಿ ಶುಕ್ರವಾರ ಪ್ರಕಟಗೊಂಡ ಲೇಖನವೊಂದು ವಿವರಗಳನ್ನು ನೀಡಿದೆ.

‘‘ಈ ಸೋಂಕನ್ನು ಹೊಂದಿಯೂ ಕಾಯಿಲೆ ಒಳಗಾಗದೆ ಇರಬಹುದೇ ಎಂಬ ಪ್ರಶ್ನೆಯನ್ನು ವಿಜ್ಞಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಬಹುಷ: ಹೌದು’’ ಎಂದು ವಾಂಡರ್‌ಬಿಟ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್‌ನಲ್ಲಿ ಸಾಂಕ್ರಾಮಿಕ ರೋಗಗಳ ಪರಿಣತ ಡಾ. ವಿಲಿಯಮ್ ಶಾಫ್ನರ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News