×
Ad

ನೆರವಿಗಾಗಿ ಬಿಲ್ ಗೇಟ್ಸ್‌ಗೆ ಚೀನಾ ಅಧ್ಯಕ್ಷ ಕೃತಜ್ಞತೆ

Update: 2020-02-22 22:06 IST

ಬೀಜಿಂಗ್, ಫೆ. 22: ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ‘ಔದಾರ್ಯ’ಕ್ಕಾಗಿ ಮತ್ತು ಮಾರಕ ಕೊರೋನವೈರಸ್ ಸೋಂಕನ್ನು ಎದುರಿಸಲು ನೀಡಿರುವ ಬೆಂಬಲಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಫೌಂಡೇಶನ್‌ಗೆ ಪತ್ರವೊಂದನ್ನು ಬರೆದಿದ್ದಾರೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ಶನಿವಾರ ವರದಿ ಮಾಡಿದೆ.

ಕೊರೋನವೈರಸನ್ನು ಎದುರಿಸುವ ಜಾಗತಿಕ ಕಾರ್ಯತಂತ್ರಕ್ಕಾಗಿ ಈ ತಿಂಗಳ ಆದಿ ಭಾಗದಲ್ಲಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯ ಡಾಲರ್ (ಸುಮಾರು 718 ಕೋಟಿ ರೂಪಾಯಿ) ದೇಣಿಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News