ಉ.ಪ್ರ.ದಲ್ಲಿ 3,000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿಲ್ಲ: ಭಾರತೀಯ ಭೂಸರ್ವೇಕ್ಷಣಾ ಇಲಾಖೆ

Update: 2020-02-22 17:41 GMT

ಕೊಲ್ಕತಾ/ಸೋನ್‌ಭದ್ರ, ಫೆ. 22: ಜಿಲ್ಲಾ ಗಣಿಗಾರಿಕೆ ಇಲಾಖೆ ಅಧಿಕಾರಿ ಪ್ರತಿಪಾದಿಸಿದಂತೆ ಉತ್ತರಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ಅಂದಾಜು ಸುಮಾರು 3,000 ಟನ್‌ಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿಲ್ಲ ಎಂದು ಭಾರತೀಯ ಭೂಸರ್ವೇಕ್ಷಣಾ ಇಲಾಖೆ (ಜಿಎಸ್ ಐ) ಶನಿವಾರ ಹೇಳಿದೆ.

‘‘ಭಾರತೀಯ ಭೂಸರ್ವೇಕ್ಷಣಾ ಇಲಾಖೆ ಯಾರಿಂದಲೂ ಅಂತಹ ದತ್ತಾಂಶವನ್ನು ಸ್ವೀಕರಿಸಿಲ್ಲ. ಸೋನ್‌ಭದ್ರ ಜಿಲ್ಲೆಯಲ್ಲಿ ಅಷ್ಟೊಂದು ಬೃಹತ್ ಪ್ರಮಾಣದ ಚಿನ್ನದ ನಿಕ್ಷೇಪವನ್ನು ಭಾರತೀಯ ಸರ್ವೇಕ್ಷಣಾ ಇಲಾಖೆ ಅಂದಾಜಿಸಿಲ್ಲ’’ ಎಂದು ಭಾರತೀಯ ಸರ್ವೇಕ್ಷಣಾಲಯದ ಪ್ರಧಾನ ನಿರ್ದೇಶಕ ಎಂ. ಶ್ರೀಧರ್ ಹೇಳಿದ್ದಾರೆ.

‘‘ನಾವು ಯಾವುದಾದರೂ ಸಮೀಕ್ಷೆ ನಡೆಸಿದರೆ ಪತ್ತೆಯಾದ ಸಂಪನ್ಮೂಲದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ. ನಾವು (ಭಾರತೀಯ ಸರ್ವೇಕಕ್ಷಣಾ ಇಲಾಖೆ, ಉತ್ತರ ವಲಯ) 1998-99 ಹಾಗೂ 1999-2000ರ ವರೆಗೆ ಸಮೀಕ್ಷೆ ನಡೆಸಿದ್ದೆವು. ಅದರ ವರದಿಯನ್ನು ಉತ್ತರಪ್ರದೇಶದ ಮಾಹಿತಿಗಿರುವ ಡಿಜಿಎಂ ಅವರೊಂದಿಗೆ ಹಂಚಿಕೊಂಡಿದ್ದೆವು’’ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯ ಸೋನ್‌ಪಹಾಡಿ ಹಾಗೂ ಹಾರ್ದಿ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಸೋನ್‌ಭದ್ರಾ ಜಿಲ್ಲಾ ಗಣಿ ಇಲಾಖೆ ಅಧಿಕಾರಿ ಕೆ.ಕೆ. ರಾಯ್ ಶುಕ್ರವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News