×
Ad

ಮಹಿಳಾ ಟ್ರಿಪಲ್ ಜಂಪ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ರೊಜಾಸ್

Update: 2020-02-22 23:15 IST

ಮ್ಯಾಡ್ರಿಡ್, ಫೆ.22: ಇಲ್ಲಿ ನಡೆದ ಒಳಾಂಗಣ ಕ್ರೀಡಾಕೂಟದಲ್ಲಿ ಮಹಿಳೆಯರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ 15.43 ಮೀ.ದೂರಕ್ಕೆ ಜಿಗಿದ ವೆನೆಜುವೆಲಾದ ಯುಲಿಮರ್ ರೋಜಾಸ್ ಹೊಸ ವಿಶ್ವ ದಾಖಲೆ ನಿರ್ಮಿಸಿದರು.

24ರ ಹರೆಯದ ವಿಶ್ವ ಚಾಂಪಿಯನ್ ರೋಜಾಸ್ ರಶ್ಯದ ತತ್ಯಾನ ಲೆಬೆಡೆವಾ 2004ರ ಮಾರ್ಚ್ ನಲ್ಲಿ ಬುಡಾಪೆಸ್ಟ್‌ನಲ್ಲಿ ನಿರ್ಮಿಸಿದ್ದ ಈ ಹಿಂದಿನ ವಿಶ್ವ ದಾಖಲೆಯನ್ನು ಮುರಿದರು. ಲೆಬೆಡೆವಾ 16 ವರ್ಷಗಳ ಹಿಂದೆ 15.36 ಮೀ.ದೂರಕ್ಕೆ ಜಿಗಿದಿದ್ದರು. ರೋಜಾಸ್ ಅವರ ಹೊಸ ದಾಖಲೆಯು ಉಕ್ರೇನ್‌ನ ಇನೆಸ್ಸಾ ಕ್ರಾವೆಟ್ಸ್ 1995ರಲ್ಲಿ ನಿರ್ಮಿಸಿದ್ದ ಹೊರಾಂಗಣದ ವಿಶ್ವ ದಾಖಲೆ(15.50 ಮೀ.)ಗಿಂತ ಕೇವಲ 7 ಸೆಂಟಿಮೀಟರ್ ಕಡಿಮೆ ಇದೆ.

‘‘ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನು ಹೆಚ್ಚು ಸಮಯವಿಲ್ಲ. ನಾನು ನಿರಂತರವಾಗಿ ಅಭ್ಯಾಸ ನಡೆಸುತ್ತಾ, ಗಮನ ಹರಿಸುತ್ತೇನೆೆ. ನನಗೆ ಈ ಸಾಧನೆ ಹೆಮ್ಮೆ ತಂದಿದೆ. ಮೊದಲ ಜಿಗಿತದಿಂದಲೇ ದಾಖಲೆಯತ್ತ ದೃಷ್ಟಿ ನೆಟ್ಟಿದ್ದೆ’’ ಎಂದು ಸ್ಪೇನ್‌ನ ಟಿವಿ ಚಾನಲ್‌ಗೆ ರೋಜಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News