ಮಂಗಿಲಪದವು : ಕಬಡ್ಡಿ ಪಂದ್ಯಾಟ ಹಾಗೂ ವಿಟ್ಲ ಎಸ್ಸೈಗೆ ಸನ್ಮಾನ

Update: 2020-02-23 04:39 GMT

ವಿಟ್ಲ, ಫೆ.23: ಮಂಗಿಲಪದವು ನ್ಯಾಶನಲ್ ಯುವಕ ಮಂಡಲದ ಆಶ್ರಯದಲ್ಲಿ 60 ಕೆ.ಜಿ. ವಿಭಾಗದ ಹಾಗೂ ಸ್ಥಳೀಯ ಆಟಗಾರರನ್ನೊಳಗೊಂಡ 6 ತಂಡಗಳ ಲೀಗ್ ಕಬಡ್ಡಿ ಪಂದ್ಯಾಟ ಮತ್ತು  ವಿಟ್ಲ ಪೊಲೀಸ್ ಠಾಣಾಧಿಕಾರಿಯಾಗಿ ನೂತನವಾಗಿ ನಿಯುಕ್ತಿಗೊಂಡ ವಿನೋದ್ ಎಸ್. ಅವರಿಗೆ ಅಭಿನಂದನಾ ಸಮಾರಂಭವು ಶುಕ್ರವಾರ ಮಂಗಿಲಪದವಿನಲ್ಲಿ ನಡೆಯಿತು.

ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದ ವಿಟ್ಲ ಠಾಣಾಧಿಕಾರಿ ವಿನೋದ್ ಎಸ್. ಮಾತನಾಡಿ, ಯುವಜನತೆ ಯಾವುದೇ ರೀತಿಯ ದುಷ್ಚಟ, ಸಮಾಜಬಾಹಿರ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ಇಂತಹ ಕ್ರೀಡಾ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿ ಉತ್ತಮವಾದ ಬದುಕು ರೂಪಿಸುವಂತಾಗಲಿ ಎಂದರು.

ಸಭಾದ್ಯಕ್ಷತೆ ವಹಿಸಿದ್ದ ಯುವಕ ಮಂಡಲದ ಗೌರವಾಧ್ಯಕ್ಷ ಮಹಾಲಿಂಗ ಭಟ್ ಮಾತನಾಡಿ, ದೂರದ ಬಾಗಲಕೋಟೆಯಲ್ಲಿ ಜನಿಸಿ, ಹೈದರಾಬಾದ್ ನಲ್ಲಿ ಶಿಕ್ಷಣವನ್ನು ಮುಗಿಸಿ, ಬಂಟ್ವಾಳ ತಾಲೂಕಿನಲ್ಲಿ ಫ್ರೊಬೆಷನರಿ ಎಸ್ಸೈಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ವಿಟ್ಲ ಠಾಣಾಧಿಕಾರಿಯಾಗಿ ನಿಯುಕ್ತಿಗೊಂಡ ವಿನೋದ್ ರವರ ವೃತ್ತಿ ಜೀವನವು ಯಶಸ್ಸನ್ನು ಕಾಣಲಿ ಹಾಗೂ ಮರ್ದಿತರ, ಅಸಹಾಯಕರ, ಅಮಾಯಕರ, ಅನ್ಯಾಯಕ್ಕೊಳಗಾದವರ ಪಾಲಿಗೆ ಆಶಾಕಿರಣವಾಗಿ ಮೂಡಿಬರಲಿ ಎಂದು ಹಾರೈಸಿದರು.

ವೀರಕಂಬ ಗ್ರಾಮ ಪಂಚಾಯತು ಅಧ್ಯಕ್ಷೆ ಪ್ರೇಮಲತಾ, ಸದಸ್ಯ ಉಬೈದ್  ಕೆ., ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ಸದಸ್ಯ ಕೆ.ಎಸ್.ಹಮೀದ್ ಕಂಬಳಬೆಟ್ಟು, ನ್ಯಾಯವಾದಿ ಆಲ್ವಿನ್ ಪ್ರಶಾಂತ್, ವಿಟ್ಲ ಠಾಣಾ ಸಿಬ್ಬಂದಿ ಸಂಜೀವ, ಯೂಸುಫ್ ಮಂಗಿಲಪದವು, ಸುಲೈಮಾನ್ ಒಕ್ಕೆತ್ತೂರು, ಹಿರಿಯ ಕಬಡ್ಡಿ ಆಟಗಾರರಾದ ಮಜೀದ್ ಮಾಣಿ, ಪದ್ಮನಾಭ ಕನಪಾದೆ ಹಾಗೂ ಇಕ್ಬಾಲ್ ಕೊಡಂಗೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪಂದ್ಯಾಟದ ಸಂಚಾಲಕ ಮುಹಮ್ಮದ್ ಶಾಲಿಹ್ ಸ್ವಾಗತಿಸಿದರು. ಯುವಕ ಮಂಡಲ ಉಪಾಧ್ಯಕ್ಷ ರಘುನಾಥ್ ಕೆಲಿಂಜ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News