ಬಿಜೈ: ದಿ. ಜಾರ್ಜ್ ಫೆರ್ನಾಂಡಿಸ್‌ರ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ

Update: 2020-02-23 05:14 GMT

ಮಂಗಳೂರು, ಫೆ.23: ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ ಅವರ ಹುಟ್ಟೂರಾದ ಬಿಜೈ ಚರ್ಚ್ ಆವರಣದಲ್ಲಿ ರವಿವಾರ ಬೆಳಗ್ಗೆ ನೆರವೇರಿತು. ಜಾರ್ಜ್ ಫೆರ್ನಾಂಡಿಸ್‌ರ ಕುಟುಂಬಸ್ಥರ ಸಮ್ಮುಖದಲ್ಲಿ ಮಂಗಳೂರು ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ದಾನ ಅವರು ಸ್ಮಾರಕ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದರು.

ದೀರ್ಘ ಕಾಲದ ಅನಾರೋಗ್ಯದ ಬಳಿಕ 2019ರ ಜನವರಿ 29ರಂದು ತನ್ನ 88ನೇ ವಯಸ್ಸಿನಲ್ಲಿ ಜಾರ್ಜ್ ಫೆರ್ನಾಂಡಿಸ್ ನಿಧನರಾಗಿದ್ದರು. ದಿಲ್ಲಿಯಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಲಾಗಿತ್ತು. ಬಳಿಕ ಅವರ ಚಿತಾಭಸ್ಮವನ್ನು ತಂದು ಬಿಜೈ ಚರ್ಚ್‌ನಲ್ಲಿ ಇರಿಸಲಾಗಿತ್ತು. ಈಗ ಚರ್ಚ್ ವತಿಯಿಂದ ಅದಕ್ಕೆ ಸ್ಮಾರಕ ನಿರ್ಮಿಸಲಾಗಿದೆ.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಬಿಜೈ ಚರ್ಚ್ ಪ್ರಧಾನ ಧರ್ಮಗುರು ವಿಲ್ಸನ್ ವೈಟಸ್ ಡಿಸೋಜ, ಸಹಾಯಕ ಧರ್ಮಗುರು ಪ್ರಮೋದ್ ಕ್ರಾಸ್ತ, ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾನ್ಸಿಸ್ ಅಶೋಕ್ ಪಿಂಟೊ, ಕಾರ್ಯದರ್ಶಿ ಪ್ರೀತಿ ಗೋಮ್ಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News