ಲಕ್ನೊ ವಿ.ವಿ.ಯಲ್ಲಿ ‘ಗರ್ಭ ಸಂಸ್ಕಾರ’ದ ಕುರಿತು ಹೊಸ ಕೋರ್ಸ್ ಆರಂಭ

Update: 2020-02-23 18:07 GMT

ಲಕ್ನೋ, ಫೆ. 22: ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ‘ಗರ್ಭ ಸಂಸ್ಕಾರ’ದ ಕುರಿತು ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್‌ಗಳು ಆರಂಭವಾಗಲಿವೆ. ಇದರೊಂದಿಗೆ ಈ ವಿಷಯದ ಬಗ್ಗೆ ಕೋರ್ಸ್ ಆರಂಭಿಸುತ್ತಿರುವ ದೇಶದ ಮೊದಲ ವಿ.ವಿ.ಯಾಗಿ ಲಕ್ನೋ ವಿ.ವಿ. ಹೊರಹೊಮ್ಮಿದೆ.

 ಈ ನೂತನ ಕೋರ್ಸ್ ಅಡಿಯಲ್ಲಿ ವಿದ್ಯಾರ್ಥಿಗಳು ಗರ್ಭಿಣಿ ಮಹಿಳೆಯರು ಏನು ತಿನ್ನಬೇಕು, ಏನು ಧರಿಸಬೇಕು, ಹೇಗೆ ವರ್ತಿಸಬೇಕು, ಯಾವ ಸಂಗೀತ ಕೇಳಬೇಕು ಹಾಗೂ ಹೇಗೆ ಆರೋಗ್ಯಯುತವಾಗಿ ಇರಬೇಕು ಮೊದಲಾದವುಗಳು ಸೇರಿದಂತೆ ತಾಯ್ತನದ ಕುರಿತು ಕಲಿಯಲಿದ್ದಾರೆ.

ಈ ಕೋರ್ಸ್ ಉದ್ಯೋಗ ಸೃಷ್ಟಿಯ ಮೂಲವಾಗಲಿದೆ. ವಿದ್ಯಾರ್ಥಿಗಳು ಈ ಗರ್ಭ ಸಂಸ್ಕಾರ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಲಕ್ನೋ ವಿಶ್ವವಿದ್ಯಾನಿಲಯ ತಿಳಿಸಿದೆ.

ಭವಿಷ್ಯದ ತಾಯಿಯ ಪಾತ್ರ ನಿರ್ವಹಿಸಲು ಬಾಲಕಿಯರಿಗೆ ತರಬೇತು ನೀಡುವ ಬಗ್ಗೆ ರಾಜ್ಯ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಆಡಳಿತದ ಮುಂದೆ ಪ್ರಸ್ತಾವ ಇರಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಲಕ್ನೊ ವಿಶ್ವವಿದ್ಯಾನಿಲಯದ ವಕ್ತಾರ ದುರ್ಗೇಶ್ ಶ್ರೀವಾಸ್ತವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News