ಝಹೀರ್ ದಾಖಲೆ ಸರಿಗಟ್ಟಿದ ಇಶಾಂತ್ ಶರ್ಮಾ

Update: 2020-02-23 18:21 GMT

ವೆಲ್ಲಿಂಗ್ಟನ್, ಫೆ.23:ಇಲ್ಲಿ ನಡೆಯುತ್ತಿರುವ ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನ ಮೂರನೇ ದಿನವಾಗಿರುವ ರವಿವಾರ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಅವರು ಐದು ವಿಕೆಟ್ ಗಳಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಝಹೀರ್ ಖಾನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಬಲಗೈ ಸೀಮರ್ ಇಶಾಂತ್ ಅವರು ಟಾಮ್ ಬ್ಲುಂಡೆಲ್, ಟಾಮ್ ಲಾಥಮ್ ಮತ್ತು ರಾಸ್ ಟೇಲರ್ ಅವರನ್ನು 2ನೇ ದಿನದಂದು ಔಟ್ ಮಾಡಿದ್ದರು. ರವಿವಾರ ಅವರು ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಅವರನ್ನು ಔಟ್ ಮಾಡಿ ದಾಖಲೆ ಬರೆದರು. ವೇಗಿ ಇಶಾಂತ್ ಶರ್ಮಾ ಝಹೀರ್ ಖಾನ್ ಅವರೊಂದಿಗೆ ಟೆಸ್ಟ್ ಪಂದ್ಯಗಳಲ್ಲಿ 11 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದ ಭಾರತದ 2ನೇ ಬೌಲರ್ ಎನಿಸಿಕೊಂಡರು. ಝಹೀರ್ 92 ಟೆಸ್ಟ್ ಪಂದ್ಯಗಳನ್ನು ಒಟ್ಟು 11 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು. ಆದರೆ ಶರ್ಮಾ ತಮ್ಮ 97ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದರು. 23 ಬಾರಿ 5 ವಿಕೆಟ್ ಗಳಿಸಿದ ಕಪಿಲ್ ದೇವ್ ಮಾತ್ರ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News