ವನಿತೆಯರ ಟ್ವೆಂಟಿ-20 ವಿಶ್ವಕಪ್: ಭಾರತಕ್ಕೆ ಬಾಂಗ್ಲಾ ಸವಾಲು

Update: 2020-02-23 18:28 GMT

ಪರ್ತ್, ಫೆ.23: ಮಹಿಳೆಯರ ಐಸಿಸಿ ಟ್ವೆಂಟಿ-20 ಟೂರ್ನಮೆಂಟ್‌ನ ಪಂದ್ಯದಲ್ಲಿ ಸೋಮವಾರ ಭಾರತದ ಮಹಿಳಾ ತಂಡಕ್ಕೆ ಬಾಂಗ್ಲಾ ತಂಡದ ಸವಾಲು ಎದುರಾಗಲಿದೆ.

ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಭಾರತವು 3-2ರಿಂದ ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಜಯಗಳಿಸಿದ ನಂತರ ಭಾರತದ ವನಿತೆಯರ ವಿಶ್ವಾಸವು ಜಾಸ್ತಿಯಾಗಿದೆ. ಶುಕ್ರವಾರ ನಡೆದ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಲೆಗ್-ಸ್ಪಿನ್ನರ್ ಪೂನಮ್ ಯಾದವ್ ಅವರ ಮಾಂತ್ರಿಕ ದಾಳಿಯ ನೆರವಿನಲ್ಲಿ ಆಸ್ಟ್ರೇಲಿಯವನ್ನು ಭಾರತಕ್ಕೆ 17 ರನ್‌ಗಳ ಅಂತರದಿಂದ ಸೋಲಿಸಲು ಸಹಾಯ ಮಾಡಿತು. ಆದರೆ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು 2018ರ ಟ್ವೆಂಟಿ-20 ಏಶ್ಯಕಪ್‌ನಲ್ಲಿ ತಮ್ಮ ಪೂರ್ವ ನೆರೆಹೊರೆಯ ತಂಡ ಬಾಂಗ್ಲಾದ ವಿರುದ್ಧ ಎರಡು ಬಾರಿ ಸೋಲು ಅನುಭವಿಸಿದ್ದರಿಂದ ಬಾಂಗ್ಲಾ ತಂಡವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಆಸ್ಟ್ರೇಲಿಯ ವಿರುದ್ಧ 15 ಎಸೆತಗಳಲ್ಲಿ 29 ರನ್ ಗಳಿಸಿದ ಜೆಮಿಮಾ ರೊಡ್ರಿಗಸ್ ಮತ್ತು 16 ವರ್ಷದ ಭರವಸೆಯ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಆ ಏಶ್ಯಕಪ್ ತಂಡದ ಭಾಗವಾಗಿರಲಿಲ್ಲ. ಭಾರತ ಬಾಂಗ್ಲಾದೇಶವನ್ನು ಸೋಲಿಸಲು ಬಯಸಿದರೆ ಈ ಜೋಡಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ.

ಉಭಯ ತಂಡಗಳ ನಡುವಿನ ಕೊನೆಯ ಐದು ಮುಖಾಮುಖಿಯಲ್ಲಿ ಭಾರತವು 3-2ರಿಂದ ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದೆ. ಸೋಮವಾರದ ಗೆಲುವು ಐದು ತಂಡಗಳ ಗುಂಪಿನಲ್ಲಿ ನಾಕೌಟ್ ಸುತ್ತಿಗೆ ಭಾರತಕ್ಕೆ ಹತ್ತಿರವಾಗಲಿದೆ.

ಭಾರತವು ಆಸ್ಟ್ರೇಲಿಯ ವಿರುದ್ಧ ಕಳೆದ ಪಂದ್ಯದಲ್ಲಿ 132ರನ್ ಗಳಿಸಿದ ಕಾರಣ ಬ್ಯಾಟಿಂಗ್ ಪ್ರದರ್ಶನವನ್ನು ಸುಧಾರಿಸಬೇಕಾಗಿದೆ.

ಪೂನಮ್ (19ಕ್ಕೆ 4) ದಾಳಿಗೆ ಸಿಲುಕಿದ ಆಸ್ಟ್ರೇಲಿಯ ಗೆಲುವಿನ ಸವಾಲನ್ನು ಬೆನ್ನಟ್ಟಲು ಸಾಧ್ಯವಾಗದೆ ಸೋಲುಪ್ಪಿಕೊಂಡಿದೆ. ಈ ವಿಶ್ವಕಪ್ ಮುಂಚಿತವಾಗಿ ತ್ರಿಕೋನ ಸರಣಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಆರಂಭಿಕ ಬ್ಯಾಟ್ಸ್‌ವುಮನ್ ಸ್ಮತಿ ಮಂಧಾನ, ಉತ್ತಮ ಕೊಡುಗೆ ನೀಡಿದ್ದರು. ಆದರೆ ಕಳೆದ ಪಂದ್ಯದಲ್ಲಿ ಅವರು ಉತ್ತಮ ಕೊಡುಗೆ ನೀಡಲಿಲ್ಲ.

ಮಧ್ಯಮ ಕ್ರಮಾಂಕದ ಬಾಟ್ಸ್‌ವುಮನ್ ದೀಪ್ತಿ ಶರ್ಮಾ ಆಸ್ಟ್ರೇಲಿಯ ವಿರುದ್ಧ 46 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದರು. ಅವರು ಇದೀಗ ತಮ್ಮ ಉತ್ತಮ ಫಾರ್ಮ್ ನ್ನು ಮುಂದುವರಿಸಲು ನೋಡುತ್ತಿದ್ದಾರೆ.

ಮಧ್ಯಮ ವೇಗಿ ಶಿಖಾ ಪಾಂಡೆ ಕೂಡಾ ಆಸ್ಟ್ರೇಲಿಯ ವಿರುದ್ಧ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಈ ಗೆಲುವಿನ ಹಿನ್ನೆಲೆಯಲ್ಲಿ ತಮ್ಮ ತಂಡವು ಕೆಲವೇ ಆಟಗಾರ್ತಿಯರ ಮೇಲೆ ಮಾತ್ರ ಅವಲಂಭಿತವಾಗಿಲ್ಲ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ತಂಡ ಉತ್ತಮವಾಗಿರುವಂತೆ ಕಾಣುತ್ತಿದೆ. ಮೊದಲು ನಾವು ಎರಡು-ಮೂರು ಆಟಗಾರರನ್ನು ಅವಲಂಭಿಸಿದ್ದೇವೆ. ಅದು ಈಗ ಆ ರೀತಿ ಇಲ್ಲ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದರು.

ಆಲ್‌ರೌಂಡರ್ ಜಹನಾರಾ ಆಲಂ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮೆನ್ ಫರ್ಗಾನಾ ಹೋಕ್ ಬಾಂಗ್ಲಾದೇಶ ತಂಡದಲ್ಲಿರುವ ಪ್ರಮುಖ ಆಟಗಾರ್ತಿಯರು.

26 ವರ್ಷದ ಋತುಮಾನದ ಹೊಕ್ ತನ್ನ ಹೆಸರಿನಲ್ಲಿ ಟ್ವೆಂಟಿ-20 ಇಂಟರ್‌ನ್ಯಾಶನಲ್ ಶತಕದ ದಾಖಲೆಯನ್ನು ಹೊಂದಿದ್ದಾರೆ. 2018 ರ ಟ್ವೆಂಟಿ -20 ಏಶ್ಯಕಪ್‌ನಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶದ ಗುಂಪು ಹಂತದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಆಲಂ ಬಾಂಗ್ಲಾದೇಶದ ಮತ್ತೊಂದು ಪ್ರಮುಖ ಆಟಗಾರ್ತಿ ಮತ್ತು ಕಳೆದ ವರ್ಷ ಜೈಪುರದಲ್ಲಿ ನಡೆದ ಭಾರತದ ದೇಶೀಯ ಮಹಿಳಾ ಟ್ವೆಂಟಿ-20 ಚಾಲೆಂಜ್ ಪಂದ್ಯಾವಳಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ಐಪಿಎಲ್ ವೆಲಾಸಿಟಿ ತಂಡದಲ್ಲಿದ್ದರು.

ಅವರ ಅತ್ಯಂತ ಅನುಭವಿ ಆಟಗಾರ್ತಿ ಬಾಂಗ್ಲಾದೇಶದ ನಾಯಕಿ ಸಲ್ಮಾ ಖಾತುನ್ ಕೂಡ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಂಡಕ್ಕೆ ಉಪಯುಕ್ತ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಸೋಮವಾರ ನಡೆಯಲಿರುವ ಗ್ರೂಪ್ ಎ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ಇಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದೆ. ಎರಡೂ ತಂಡಗಳು ಪಂದ್ಯಾವಳಿಯ ಆರಂಭಿಕ ಪಂದ್ಯಗಳನ್ನು ಕಳೆದುಕೊಂಡಿವೆ. ಶ್ರೀಲಂಕಾ ಶನಿವಾರ ನ್ಯೂಝಿಲ್ಯಾಂಡ್ ವಿರುದ್ಧ 7 ವಿಕೆಟ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು.

ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧಾನ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಪೂನಮ್ ಯಾದವ್, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ರಾಜೇಶ್ವರಿ ಗಾಯಕ್ವಾಡ್, ರಿಚಾ ಘೋಷ್, ವೇದಾ ಕೃಷ್ಣಮೂರ್ತಿ, ಶಿಖಾ ಪಾಂಡೆ, ಅರುಂದತಿ ರೆಡ್ಡಿ ,ಪೂಜಾ ವಸ್ತ್ರಕರ್.

ಬಾಂಗ್ಲಾದೇಶ: ಸಲ್ಮಾ ಖತುನ್ (ನಾಯಕಿ), ರುಮಾನಾ ಅಹ್ಮದ್, ಅಯಿಷಾ ರಹ್ಮಾನ್‌ಫಾಹಿಮಾ ಖಾತುನ್, ಫರ್ಗಾನಾ ಹೋಕ್, ಜಹನಾರಾ ಆಲಂ, ಖದಿಜತುಲ್ ಕುಬ್ರಾ, ಶೋಭ್ನಾ ಮೋಸ್ಟರಿ, ಮುರ್ಷಿದಾ ಖಾತುನ್, ನಹಿದಾ ಅಕ್ತರ್, ನಿಗರ್ ಸುಲ್ತಾನಾ (ವಿಕೆಟ್ ಕೀಪರ್), ಪನ್ನಾ ಘೋಷ್, ರಿತು ಮೋನಿ, ಸಂಜಿದಾ ಇಸ್ಲಾಂ, ಶಮಿಮಾ ಸುಲ್ತಾನ.

ಪಂದ್ಯವು ಸಂಜೆ 4: 30ಕ್ಕೆ ಪ್ರಾರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News