ದುಬೈ ಓಪನ್ ಜಯಿಸಿದ ಸಿಮೊನಾ ಹ್ಯಾಲೆಪ್

Update: 2020-02-23 18:29 GMT

ದುಬೈ, ಫೆ.23: ಕಝಕಿಸ್ತಾನದ ಉದಯೋನ್ಮುಖ ಟೆನಿಸ್ ತಾರೆ ಎಲೆನಾ ರೈಬಕಿನಾ ಅವರನ್ನು 3-6, 6-3, 7-6 (5) ಸೆಟ್‌ಗಳಿಂದ ಸೋಲಿಸಿದ ಸಿಮೋನಾ ಹ್ಯಾಲೆಪ್ ಎರಡನೇ ಬಾರಿ ದುಬೈ ಚಾಂಪಿಯನ್‌ಶಿಪ್ ಜಯಿಸಿದ್ದಾರೆ.

ರೋಮೆನಿಯಾದ ಅಗ್ರ ಶ್ರೇಯಾಂಕಿತೆ ಸಿಮೋನಾ ಹ್ಯಾಲೆಪ್ ವೃತ್ತಿಬದುಕಿನಲ್ಲಿ 20ನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಹಣಾಹಣಿಯಲ್ಲಿ ಹ್ಯಾಲೆಪ್ ಗೆಲುವಿನ ನಗೆ ಬೀರಿದರು.

2015 ರಲ್ಲಿ ಮೊದಲ ಬಾರಿಗೆ ದುಬೈನಲ್ಲಿ ಪ್ರಶಸ್ತಿಯನ್ನು ಗೆದ್ದ ರೋಮೆನಿಯನ್ ಹ್ಯಾಲೆಪ್ ಮತ್ತೊಮ್ಮೆ ದುಬೈ ಕಿರೀಟವನ್ನು ಮುಡಿಗೇರಿಸಿಕೊಂಡರು.

‘‘ನಾನು ನಿಜವಾಗಿಯೂ ಎಲೆನಾಳರನ್ನು ಅಭಿನಂದಿಸಲು ಬಯಸುತ್ತೇನೆ. ಅವರು ಇನ್ನೂ ಚಿಕ್ಕವರು, ಉನ್ನತ ಮಟ್ಟದಲ್ಲಿ ಆಡಲು ಹಲವು ವರ್ಷಗಳಿವೆ’’ ಎಂದು ಹ್ಯಾಲೆಪ್ ಪಂದ್ಯದ ನಂತರ ಸಂದರ್ಶನದಲ್ಲಿ ಹೇಳಿದರು.

ಈ ಪ್ರಶಸ್ತಿಯು ವಿಂಬಲ್ಡನ್ ಚಾಂಪಿಯನ್ ಹ್ಯಾಲೆಪ್ ಅವರ ವೃತ್ತಿಜೀವನದ 20 ನೇ ಪ್ರಶಸ್ತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News