ಮಂಗಳೂರು: ಚರ್ಚ್ ಪತ್ರಿಕೆಗಳ ಬರಹಗಾರರ ಸಮ್ಮೇಳನ

Update: 2020-02-24 07:26 GMT

ಮಂಗಳೂರು, ಫೆ.24: ಕೊಂಕಣಿ ಲೇಖಕರ ಸಂಘ ಕರ್ನಾಟಕ, ಸಂದೇಶ ಪ್ರತಿಷ್ಠಾನ, ಮಂಗಳೂರು ಮತ್ತು ಆಮ್ಚೊ ಸಂದೇಶ್ ಕೊಂಕಣಿ ಮಾಸಪತ್ರಿಕೆಯ ಸಹಯೋಗದಲ್ಲಿ ಮಂಗಳೂರು ಮತ್ತು ಉಡುಪಿ ಕ್ರೈಸ್ತ ಧರ್ಮಪ್ರಾಂತದ ವಿವಿಧ ಚರ್ಚುಗಳ ಪತ್ರಿಕೆಯ ಸಂಪಾದಕರು ಮತ್ತು ಬರಹಗಾರರ ಸಮ್ಮೇಳನವು ಫೆ.23ಂದು ನಗರದ ಸಂದೇಶದ ಸಭಾಭವನದಲ್ಲಿ ನಡೆಯಿತು.

ಸಮ್ಮೇಳನವನ್ನು ಉದ್ಘಾಟಿಸಿದ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ.ಆಸಿಸಿ ಡಲ್ಮೇಡಾ, ಸ್ಥಳೀಯ ಪತ್ರಿಕೆಗಳು ಜನರಿಗೆ ಹೆಚ್ಚಾಗಿ ತಲುಪುವುದರಿಂದ ಅವರಿಗೆ ಉಪಯುಕ್ತವಾದ ಮಾಹಿತಿಯನ್ನು ಸಮರ್ಪಕವಾಗಿ ಕೊಡಲು ಪ್ರಯತ್ನಿಸುವಂತೆ ಕರೆ ನೀಡಿದರು.

ಕೆಥೊಲಿಕ್ ಸಭಾ, ಮಂಗಳೂರು ಪ್ರದೇಶದ ಅಧ್ಯಕ್ಷ ರಾಲ್ಫ್ ಡಿಕೋಸ್ತ ಕೊಂಕಣಿ ಭಾಷೆಯನ್ನು ಉಳಿಸಿ ಬೆಳೆಸುವುದರಲ್ಲಿ ಸ್ಥಳೀಯ ಪತ್ರಿಕೆಗಳ ಬರಹಗಾರರ ಪಾತ್ರ ಹಿರಿದು. ಭಾಷೆಯ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

  ಕೊಂಕಣಿಯ ಖ್ಯಾತ ಬರಹಗಾರ ಡಾ.ಜೆರಾಲ್ಡ್ ಪಿಂಟೊ ಪತ್ರಿಕೆಗಳಿಗೆ ಲೇಖನ ಬರೆಯುವುದು ಮತ್ತು ವರದಿ ಕಳುಹಿಸುವ ಕುರಿತು ಮತ್ತು ಲವಿ ಗಂಜಿಮಠ ಸಣ್ಣಕಥೆ ಬರೆಯುವ ಕುರಿತು ಉಪನ್ಯಾಸ ನೀಡಿದರು.

ಮಾರ್ಸೆಲ್ ಡಿಸೋಜ ಸಂವಾದ ನಡೆಸಿ ಕೊಟ್ಟರು. ಐರಿನ್ ರೆಬೆಲ್ಲೊ ಸ್ವಾಗತಿಸಿದರು. ಸಿಜ್ಯೆಸ್ ತಾಕೊಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News