ಚೀನಾ: ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 2,592ಕ್ಕೇರಿಕೆ

Update: 2020-02-24 16:19 GMT

ಬೀಜಿಂಗ್,ಫೆ.24: ಚೀನಾದಲ್ಲಿ ಕೊರೋನ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಸೋಮವಾರ 2592ಕ್ಕೆ ತಲುಪಿದ್ದು, ಈ ಮಾರಕ ರೋಗ ಪೀಡಿತರಾದವರ ಸಂಖ್ಯೆ 77 ಸಾವಿರಕ್ಕೇರಿದೆ ಎಂದು ಚೀನಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 ಕೊರೋನ ವೈರಸ್ ಬಾಧೆಯಿಂದ ತೀವ್ರವಾಗಿ ತತ್ತರಿಸಿರುವ ವುಹಾನ್ ನಗರಕ್ಕೆ ಭೇಟಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಸೋಮವಾರ ವಿವಿಧ ಆಸ್ಪತ್ರೆಗಳನ್ನು ಸಂದರ್ಶಿಸಿದರು. ದೇಶಾದ್ಯಂತ 31 ಪ್ರಾಂತಗಳಲ್ಲಿ ನೊವೆಲ್ ಕೊರೋನ ವೈರಸ್ ಸೋಂಕಿನ 409 ನೂತನ ಪ್ರಕರಣಗಳು ದೃಢಪಟ್ಟಿರುವ ಬಗ್ಗೆ ವರದಿಗಳನ್ನು ಸ್ವೀಕರಿಸಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆದಾಗ್ಯೂ ರೋಗದಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳ ಸಂಖ್ಯೆಯು, ಹೊಸದಾಗಿ ಸೋಂಕು ತಗಲಿದವರ ಸಂಖ್ಯೆಗಿಂ ಸತತ ಆರನೆಯ ದಿನವೂ ಅಧಿಕವಾಗಿರುವುದು, ಚೀನಾದಲ್ಲಿ ವೈರಸ್ ಹಾವಳಿ ನಿಯಂತ್ರಣಕ್ಕೆ ಬರುತ್ತಿರುವ ಸೂಚನೆಯನ್ನು ತೋರ್ಪಡಿಸಿದೆಯೆಂದು ಎನ್‌ಎಚ್‌ಸಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News