×
Ad

ಸಾಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಗಾಂಧೀಜಿ ಹೆಸರು ಉಲ್ಲೇಖಿಸದೆ ಮೋದಿ ಹೆಸರು ಬರೆದ ಟ್ರಂಪ್!

Update: 2020-02-24 23:10 IST

ಅಹ್ಮದಾಬಾದ್, ಫೆ.24: ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ಸಬರಮತಿ ಆಶ್ರಮವನ್ನು ಸಂದರ್ಶಿಸಿದರು. ಈ ವೇಳೆ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರಸಿದ್ಧ ‘ರಘುಪತಿ ರಾಘವ ರಾಜಾ ರಾಮ್’ ಎಂಬ ಹಾಡು ಮೆಲುಧ್ವನಿಯಲ್ಲಿ ಪ್ರಸಾರವಾಗುತ್ತಿತ್ತು.

ಆಶ್ರಮದಲ್ಲಿ ಗಾಂಧೀಜಿ ನೂಲು ತೆಗೆಯುತ್ತಿದ್ದ ಚರಕದ ಎದುರು ಕುಳಿತ ಟ್ರಂಪ್ ದಂಪತಿ ಚರಕ ತಿರುಗಿಸಲು ಪ್ರಯತ್ನಿಸಿದರು. ಬಳಿಕ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ - ಈ ಅದ್ಭುತ ಭೇಟಿಯನ್ನು ಸಾಧ್ಯವಾಗಿಸಿದ್ದಕ್ಕೆ ನಿಮಗೆ ವಂದನೆಗಳು ಪ್ರಧಾನಿ ಮೋದಿ’ ಎಂಬ ಸಂದೇಶ ಬರೆದಿದ್ದಾರೆ.

ಆದರೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬಗ್ಗೆ ಉಲ್ಲೇಖಿಸದೆ ಟ್ರಂಪ್ ಬರೆದಿರುವ ಸಂದೇಶಕ್ಕೆ ಟ್ವಿಟರ್‌ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮಾಜಿ ಪ್ರಧಾನಿ ಒಬಾಮಾ ಸಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಬರೆದಿರುವ ಸಂದೇಶವನ್ನು ಹಲವರು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

 ‘ಗಾಂಧೀಜಿಯವರ ಬದುಕಿನ ಸಾಕ್ಷಿಯಾಗಿದ್ದ ಈ ಆಶ್ರಮಕ್ಕೆ ಭೇಟಿ ನೀಡುವ ಸೌಭಾಗ್ಯದಿಂದ ಹೃದಯ ತುಂಬಿ ಬಂದಿದೆ. ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಮಹಾಪುರುಷರಾಗಿದ್ದಾರೆ’ ಎಂದು ಒಬಾಮಾ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News