ಸುಪ್ರೀಂಕೋರ್ಟ್‌ನ ಆರು ನ್ಯಾಯಾಧೀಶರಿಗೆ ಎಚ್1 ಎನ್1 ಸೋಂಕು

Update: 2020-02-25 08:14 GMT

ಹೊಸದಿಲ್ಲಿ, ಫೆ.25: ಸುಪ್ರೀಂಕೋರ್ಟ್‌ನ ಆರು ನ್ಯಾಯಾಧೀಶರಿಗೆ ಎಚ್1ಎನ್1 ಸೋಂಕು ಕಾಣಿಸಿಕೊಂಡಿದ್ದು, ಎಲ್ಲ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಅವರನ್ನು ಭೇಟಿಯಾಗಿ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ ಎಂದು ಜಸ್ಟಿಸ್ ಡಿವೈ ಚಂದ್ರಚೂಡ್ ಇಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಓರ್ವ ನ್ಯಾಯಾಧೀಶ ಸಂಜೀವ್ ಖನ್ನಾ ಮುಖಕ್ಕೆ ಮಾಸ್ಕ್ ಧರಿಸಿ ನ್ಯಾಯಾಲಯಕ್ಕೆ ಆಗಮಿಸಿದ್ದರು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮುಖ್ಯ ನ್ಯಾಯಾಧೀಶರು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷ ದುಶ್ಯಂತ್ ದವೆ ಅವರನ್ನು ಭೇಟಿಯಾಗಿದ್ದಾರೆ.

‘‘ಜಸ್ಟಿಸ್ ಬೋಬ್ಡೆ ಬಹಳಷ್ಟು ಚಿಂತಿತರಾಗಿದ್ದು, ಚುಚ್ಚುಮದ್ದು ಹಾಗೂ ವ್ಯಾಕ್ಸಿನೇಶನ್‌ಗಾಗಿ ಸುಪ್ರೀಂಕೋರ್ಟ್‌ನಲ್ಲಿ ಸರಕಾರ ಔಷಧಾಲಯವನ್ನು ಸ್ಥಾಪಿಸಲಿದೆ ಎಂದು ಅವರು ನನಗೆ ತಿಳಿಸಿದರು’’ ಎನ್ನುವುದಾಗಿ ಸಭೆಯ ಬಳಿಕ ದವೆ ಹೇಳಿದ್ದಾರೆ.

 ಇತ್ತೀಚೆಗೆ ಸುಪ್ರೀಂಕೋರ್ಟ್‌ನ ಸಂಕೀರ್ಣದಲ್ಲಿ ನಡೆದ ನ್ಯಾಯಾಂಗ ಸಮಾವೇಶದಲ್ಲಿ ಕೆಲವು ವಿದೇಶಿ ನಿಯೋಗದ ಸದಸ್ಯರುಗಳು ಭಾಗವಹಿಸಿದ್ದರು.ಆ ಸದಸ್ಯರಿಗೆ ವೈರಸ್ ಸೋಂಕು ಇತ್ತು ಎಂದು ದವೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News