ಪ್ರಚೋದನಾತ್ಮಕ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ: ಬಿಜೆಪಿಯ ಕಪಿಲ್ ಮಿಶ್ರಾ ಕುರಿತು ಗಂಭೀರ್

Update: 2020-02-26 10:31 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯ ವಿವಿಧ ಪ್ರದೇಶಗಳಲ್ಲಿ ಸಿಎಎ ಪರ-ವಿರೋಧಿ ಹೋರಾಟಗಾರರ ನಡುವೆ ಘರ್ಷಣೆ ಹಾಗೂ ಹಿಂಸಾತ್ಮಕ ಘಟನೆಗಳಲ್ಲಿ ಏಳು ಮಂದಿ ಮೃತಪಟ್ಟಿರುವ ಬೆನ್ನಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, ಕೆಲ ದಿನಗಳ ಹಿಂದೆ ಜಾಫ್ರಾಬಾದ್‍ ನಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಪಕ್ಷದ ನಾಯಕ ಕಪಿಲ್ ಮಿಶ್ರಾ ವಿರುದ್ಧ ಕಿಡಿಕಾರಿದ್ದಾರಲ್ಲದೆ ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

"ಆ ವ್ಯಕ್ತಿ ಯಾರೇ ಆಗಲಿ, ಅದು ಕಪಿಲ್ ಮಿಶ್ರಾ ಅಥವಾ ಇನ್ಯಾರಾದರೂ ಆಗಿರಲಿ, ಅವರು ಯಾವುದೇ ಪಕ್ಷದವರಿರಲಿ, ಅವರು ಪ್ರಚೋದನಾತ್ಮಕ ಭಾಷಣ ನೀಡಿದ್ದಾರೆಂದಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು'' ಎಂದು ಗಂಭೀರ್ ಮಂಗಳವಾರ ಹೇಳಿದರು.

``ಪೊಲೀಸ್ ಸಿಬ್ಬಂದಿಯೇ ಸುರಕ್ಷಿತರಲ್ಲವೆಂದಾದರೆ ಜನಸಾಮಾನ್ಯರು ಏನು ಯೋಚಿಸಬಹುದೆಂಬುದನ್ನು ಯಾರು ಬೇಕಾದರೂ ಊಹಿಸಬಲ್ಲರು'' ಎಂದು ಗಂಭೀರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News