ದಿಲ್ಲಿಯಲ್ಲಿ ಮತ್ತೆ ಹಿಂಸಾಚಾರ: ಪತ್ರಕರ್ತನಿಗೆ ಗುಂಡೇಟು, ಮುಸ್ಲಿಮರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ

Update: 2020-02-26 10:29 GMT
Photo: Twitter

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ಮಂಗಳವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ದುಷ್ಕರ್ಮಿಗಳು ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿ ಕಬೀರ್ ನಗರ್ ನಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆಸುತ್ತಿದ್ದಾರೆ ಎಂದು scroll.in ವರದಿ ಮಾಡಿದೆ. ಇದೇ ಸಂದರ್ಭ ಪತ್ರಕರ್ತರ ಮೇಲೂ ಹಲ್ಲೆ ನಡೆಸಲಾಗಿದ್ದು, ಅವರಲ್ಲಿದ್ದ ಫೋಟೊ, ವಿಡಿಯೋಗಳನ್ನು ಡಿಲಿಟ್ ಮಾಡಿಸಲಾಗುತ್ತಿದೆ ಎಂದು ವರದಿಯಾಗಿದೆ.

ಮಂಗಳವಾರ ನಡೆದ ಹಿಂಸಾಚಾರದಲ್ಲಿ 150ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಸಾಧ್ಯತೆ ಇದೆ. ಗೋಕುಲ್ಪುರಿಯಲ್ಲಿ ಹಲವು ಅಂಗಡಿಗಳ ಬೆಂಕಿ ಹಚ್ಚಲಾಗಿದ್ದು, ಇಡೀ ಪಟ್ಟಣ ಸ್ತಬ್ಧವಾಗಿದೆ.

"ಮೌಜ್ ಪುರ್ ನಲ್ಲಿ ಪತ್ರಕರ್ತ ಆಕಾಶ್ ರಿಗೆ ಗುಂಡಿಕ್ಕಲಾಗಿದೆ. ಎನ್ ಡಿಟಿವಿಯ ಇಬ್ಬರು ಪತ್ರಕರ್ತರಿಗೆ ಗಂಭೀರ ಹಲ್ಲೆ ನಡೆಸಲಾಗಿದೆ. ಪೊಲೀಸರಿಗೆ ಗುಂಡಿಕ್ಕಲಾಗಿದೆ. ಪತ್ರಕರ್ತರ ಧರ್ಮವನ್ನು ಕೇಳಲಾಗುತ್ತಿದೆ. ಇದು ನವ ಭಾರತವೇ" ಎಂದು ಪತ್ರಕರ್ತೆ ಶಾಂತಶ್ರೀ ಸರ್ಕಾರ್ ಟ್ವೀಟ್ ಮಾಡಿ, ಗಾಯಾಳು ಪತ್ರಕರ್ತನ ಫೋಟೊ ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಿಧಿ ರಝ್ದಾನ್, "ನನ್ನ ಇಬ್ಬರು ಸಹೋದ್ಯೋಗಿಗಳಾದ ಅರವಿಂದ್ ಗುಣಶೇಖರ್ ಮತ್ತು ಸೌರಭ್ ಶುಕ್ಲಾ ಮೇಲೆ ಹಲ್ಲೆ ನಡೆಸಲಾಗಿದೆ. ಅವರಿಬ್ಬರು ಹಿಂದೂ ಎಂದು ತಿಳಿದ ನಂತರ ಹಲ್ಲೆಯನ್ನು ನಿಲ್ಲಿಸಲಾಯಿತು" ಎಂದಿದ್ದಾರೆ.

ಮಸೀದಿಗೆ ಬೆಂಕಿ ಹಚ್ಚುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದದ್ದಕ್ಕಾಗಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಉದಯ್ ಸಿಂಗ್ ರಾಣಾ ಎಂಬವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News