ದಿಲ್ಲಿ: ಪೊಲೀಸ್ ಪೇದೆಗೆ ಬಂದೂಕು ತೋರಿಸಿ ಬೆದರಿಸಿದ್ದ ದುಷ್ಕರ್ಮಿಯ ಬಂಧನ

Update: 2020-02-26 10:26 GMT

ಹೊಸದಿಲ್ಲಿ: ನಿನ್ನೆ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರ ಎದುರಲ್ಲೇ ಗುಂಡು ಹಾರಿಸಿದ್ದ ದುಷ್ಕರ್ಮಿಯನ್ನು ಇಂದು ಬಂಧಿಸಲಾಗಿದೆ. ಪೊಲೀಸ್ ಪೇದೆಗೆ ಬಂದೂಕು ತೋರಿಸಿ ಬೆದರಿಸಿದ್ದಾತನನ್ನು 33 ವರ್ಷದ ಶಾರೂಕ್ ಎಂದು ಗುರುತಿಸಲಾಗಿದೆ.

ಜಾಫ್ರಾಬಾದ್ ನಲ್ಲಿ ನಡೆದ ಹಿಂಸಾಚಾರದ ವೇಳೆ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಪೊಲೀಸ್ ಪೇದೆಯೊಬ್ಬರನ್ನು ಬಂದೂಕು ತೋರಿಸಿ ಬೆದರಿಸಿದ್ದ. ನಂತರ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಈ ಘಟನೆಯ ವಿಡಿಯೊ ಮತ್ತು ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಬಂಧಿತ ಶಾರೂಕ್ ಸ್ಥಳೀಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News