ದಿಲ್ಲಿ : ಉದ್ರಿಕ್ತ ಗುಂಪಿನಿಂದ ಮುಸ್ಲಿಂ ಕುಟುಂಬವನ್ನು ರಕ್ಷಿಸಿದ ಬಿಜೆಪಿ ಕೌನ್ಸಿಲರ್

Update: 2020-02-26 10:30 GMT
ಫೈಲ್ ಚಿತ್ರ

ಹೊಸದಿಲ್ಲಿ :  ದಿಲ್ಲಿಯ ಯಮುನಾ ವಿಹಾರ್ ಪ್ರದೇಶದಲ್ಲಿ ಸುಮಾರು 150 ಮಂದಿಯಿದ್ದ ಉದ್ರಿಕ್ತ ಗುಂಪೊಂದು ಮುಸ್ಲಿಂ ಕುಟುಂಬದ ಮನೆಯೊಂದಕ್ಕೆ ಬೆಂಕಿ ಹಚ್ಚುವುದನ್ನು ಸ್ಥಳೀಯ ಬಿಜೆಪಿ ವಾರ್ಡ್ ಕೌನ್ಸಿಲರ್ ತಡೆದಿದ್ದಾರೆ.

ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ''ಸೋಮವಾರ ರಾತ್ರಿ 11.30ರ ಸುಮಾರಿಗೆ ಗುಂಪೊಂದು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುತ್ತಾ ಪೊಲೀಸರು ಬ್ಯಾರಿಕೇಡ್ ಹಾಕದೇ ಇದ್ದ ರಸ್ತೆ ಪ್ರವೇಶಿಸಿ ನಂತರ ತನ್ನ ಮನೆಯ ಕೆಳ ಭಾಗದಲ್ಲಿ ನಾವು ಬಾಡಿಗೆಗೆ ನೀಡಿರುವ ಬುಟೀಕ್ ಒಂದಕ್ಕೆ ಬೆಂಕಿ ಹಚ್ಚಿತ್ತು. ನಮ್ಮ ಕುಟುಂಬಕ್ಕೆ ಸೇರಿದ್ದ ಕಾರು ಹಾಗೂ ಮೋಟಾರ್ ಬೈಕಿಗೂ ಬೆಂಕಿ ಹಚ್ಚಿದ ಉದ್ರಿಕ್ತರು ನಂತರ ನಮ್ಮ ಕಾರು ಹಾಗೂ ಬೈಕನ್ನು ಶೆಡ್‍ನಿಂದ ಎಳೆದು ಬೆಂಕಿ ಹಚ್ಚಿದ್ದರು, ಅಷ್ಟರೊಳಗಾಗಿ ನಮ್ಮ ಕುಟುಂಬದ ಬಹು ಕಾಲದ ಸ್ನೇಹಿತರಾಗಿರುವ ಸ್ಥಳೀಯ ಬಿಜೆಪಿ ವಾರ್ಡ್ ಕೌನ್ಸಿಲರ್ ಆಗಮಿಸಿ ಉದ್ರಿಕ್ತರು ನಮ್ಮ ಮನೆಗೆ ಯಾವುದೇ ಹಾನಿಗೈಯ್ಯದಂತೆ ತಡೆದರು,'' ಎಂದು ಕುಟುಂಬದ ಸದಸ್ಯರೊಬ್ಬರು ವಿವರಿಸಿದ್ದಾರೆ.

ಉದ್ರಿಕ್ತರು ಮನೆಯತ್ತ ಆಗಮಿಸುತ್ತಿದ್ದಂತೆಯೇ  ಎರಡು ತಿಂಗಳ ಮಗುವಿನ ಸಹಿತ ಕುಟುಂಬ ಸದಸ್ಯರೆಲ್ಲರು ಅಲ್ಲಿಂದ ತಪ್ಪಿಸಿಕೊಂಡಿದ್ದರೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News