‘ನಾಸಾ’ದ ಶ್ರೇಷ್ಠ ಕರಿಯ ಗಣಿತಜ್ಞೆ ನಿಧನ

Update: 2020-02-25 15:57 GMT
ಫೋಟೊ ಕೃಪೆ: //twitter.com/NASA

ವಾಶಿಂಗ್ಟನ್, ಫೆ. 25: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಶ್ರೇಷ್ಠ ಗಣಿತಜ್ಞರಾಗಿದ್ದ ಕರಿಯ ಮಹಿಳೆ ಕ್ಯಾಥರೀನ್ ಜಾನ್ಸನ್ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು.

‘ಹಿಡನ್ ಫಿಗರ್ಸ್’ ಎಂಬ ಚಿತ್ರದಲ್ಲಿ ಅವರ ಬದುಕಿನ ವಿವರಗಳಿವೆ.

ಜಾನ್ಸನ್‌ರ ಲೆಕ್ಕಾಚಾರದಿಂದಾಗಿ 1969ರಲ್ಲಿ ಮೊದಲ ಮಾನವನನ್ನು ಚಂದ್ರನ ಮೇಲೆ ಇಳಿಸಲು ನಾಸಾಕ್ಕೆ ಸಾಧ್ಯವಾಗಿತ್ತು. ಆದರೆ, ಅವರ ಸಾಧನೆ 2017ರವರೆಗೂ ಅಜ್ಞಾತವಾಗಿತ್ತು. 2017ರಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ‘ಹಿಡನ್ ಫಿಗರ್ಸ್’ ಚಿತ್ರವು ನಾಸಾದಲ್ಲಿ ಕೆಲಸ ಮಾಡಿದ ಮೂವರು ಕರಿಯ ಮಹಿಳೆಯರ ಕತೆಗಳನ್ನು ಒಳಗೊಂಡಿದೆ.

1961ರಲ್ಲಿ ಜಾನ್ಸನ್ ಮತ್ತು ಅವರ ಸಹೋದ್ಯೋಗಿಯೊಬ್ಬರು ಉಪಕಕ್ಷೆಯ ಆಯಾಮಗಳ ಲೆಕ್ಕಾಚಾರ ಮಾಡಿದರು. ಅದರ ಆಧಾರದಲ್ಲಿ ಅಮೆರಿಕದ ಗಗನಯಾನಿ ಅಲನ್ ಶೆಫರ್ಡ್ ಬಾಹ್ಯಾಕಾಶಕ್ಕೆ ಪ್ರಯಾಣಿಸಿದರು ಹಾಗೂ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಅಮೆರಿಕನ್ ಆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News