ಚೆಂಡು ವಿರೂಪ ಪ್ರಕರಣಕ್ಕೆ ಸಾಕ್ಷಿಯಾದ ಕೇಪ್‌ಟೌನ್‌ಗೆ ವಾರ್ನರ್, ಸ್ಮಿತ್ ವಾಪಸ್

Update: 2020-02-25 17:26 GMT

ಕೇಪ್‌ಟೌನ್, ಫೆ.25: ಕ್ರಿಕೆಟ್‌ನ ಒಂದು ಮಹಾ ಮೋಸದ ಪ್ರಕರಣವಾಗಿ ಭಾರೀ ಸುದ್ದಿ ಮಾಡಿದ್ದ ಚೆಂಡು ವಿರೂಪದಲ್ಲಿ ಸಿಲುಕಿ ಹಾಕಿಕೊಂಡ ಎರಡು ವರ್ಷಗಳ ಬಳಿಕ ನ್ಯೂಲ್ಯಾಂಡ್ಸ್ ಮೈದಾನಕ್ಕೆ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ವಾಪಸಾಗಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯವನ್ನಾಡಲು ಈ ಇಬ್ಬರು ಆಟಗಾರರು ಇಲ್ಲಿಗೆ ಬಂದಿದ್ದಾರೆ. ಕೇಪ್‌ಟೌನ್‌ನಲ್ಲಿ 2018ರ ಮಾ.24ರಂದು ನಡೆದ ದ.ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಸ್ಮಿತ್,ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್ ಪೇಪರ್‌ನಿಂದ ಚೆಂಡನ್ನು ಉಜ್ಜಿ ಚೆಂಡಿನ ರೂಪವನ್ನು ಕೆಡಿಸುವ ಕೆಲಸಕ್ಕೆ ಕೈಹಾಕಿ ಸಿಕ್ಕಿ ಬಿದ್ದಿದ್ದರು. ಈ ಕೃತ್ಯಕ್ಕೆ ಇಬ್ಬರಿಗೂ ಕ್ರಿಕೆಟ್ ಆಸ್ಟ್ರೇಲಿಯ ಒಂದು ವರ್ಷ ನಿಷೇಧ ವಿಧಿಸಿತ್ತು. ಬುಧವಾರದ ಪಂದ್ಯದ ವೇಳೆ ಸ್ಮಿತ್ ಹಾಗೂ ವಾರ್ನರ್‌ಗೆ ದ.ಆಫ್ರಿಕಾ ಪ್ರೇಕ್ಷಕರು ನಿಂದಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆ ತಪ್ಪಿಸಲು ಸ್ಟೇಡಿಯಂನ ಸುತ್ತಮುತ್ತ ‘ಗರಿಷ್ಠ ಭದ್ರತೆ’ಯನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News