ಫೆ.27ರಂದು ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ

Update: 2020-02-26 08:09 GMT

 ಮಂಗಳೂರು, ಫೆ.26: ಮಂಗಳೂರು ವಿಶ್ವವಿದ್ಯಾನಿಲಯದ 38ನೆ ಘಟಿಕೋತ್ಸವ ಫೆ.27ರಂದು ಅಪರಾಹ್ನ 3 ಗಂಟೆಗೆ ವಿವಿಯ ಮಂಗಳಾ ಸಭಾಂಗಣದಲ್ಲಿ ಜರುಗಲಿದೆ ಎಂದು ವಿವಿಯ ಕುಲಪತಿ ಪ್ರೊಪಿ.ಎಸ್.ಯಡಪಡಿತ್ತಾಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಹ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸಿ.ಎನ್. ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು ಎಂದವರು ವಿವರಿಸಿದರು.

ಘಟಿಕೋತ್ಸವದಲ್ಲಿ ಈ ಬಾರಿ ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕೆ.ಸಿ.ನಾಯ್ಕ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು ಎಂದು ಎಂದವರು ತಿಳಿಸಿದ್ದಾರೆ.

ಮಂಗಳೂರು ವಿವಿ ಆವರಣದಲ್ಲಿ ನಿರ್ಮಿಸಲಾದ ಯೋಧರ ಸ್ಮಾರಕ 'ಶಹೀದ್ ಸ್ಥಳ’ದ ಉದ್ಘಾಟನೆಯನ್ನು ಸಚಿವ ಮುರಳೀಧರನ್ ಇದೇ ಸಂದರ್ಭ ನೆರವೇರಿಸಲಿದ್ದಾರೆ ಎಂದು ಕುಲಪತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿವಿ ಕುಲಸಚಿವ(ಆಡಳಿತ)ರಾದ ಎ.ಎಂ.ಖಾನ್, ರವೀಂದ್ರ ಆಚಾರ್ಯ (ಪರೀಕ್ಷಾಂಗ), ವಿಶೇಷ ಅಧಿಕಾರಿ ಜಯಶಂಕರ್, ಸಿಂಡಿಕೇಟ್ ಸದಸ್ಯ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

                                          ಕೆ.ಸಿ.ನಾಯ್ಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News