ಫೆ.27, 28ರಂದು ಎ.ಜೆ.ಯಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ

Update: 2020-02-26 07:40 GMT

ಮಂಗಳೂರು, ಫೆ.26: ಎ.ಜೆ. ದಂತ ವಿಜ್ಞಾನಗಳ ಸಂಸ್ಥೆಯು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಫೆ.27 ಮತ್ತು 28ರಂದು 3ನೇ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎ.ಜೆ. ದಂತ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ.ಕೆ.ನಿಲ್ಲನ್ ಶೆಟ್ಟಿ, ಪಂದ್ಯಾಟವು ಎ.ಜೆ. ಆಡಿಟೋರಿಯಂನಲ್ಲಿ ನಡೆಯಲಿದೆ ಎಂದರು.

ಪ್ರೊ ಕಬಡ್ಡಿ ಅಟಗಾರ ಪ್ರಶಾಂತ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪಂದ್ಯಾಟದಲ್ಲಿ ಒಟ್ಟು 45 ತಂಡಗಳು ಭಾಗವಹಿಸಲಿದ್ದು, ಪ್ರೊ ಕಬಡ್ಡಿ ಮ್ಯಾಟ್ ನಲ್ಲಿ ನಡೆಯಲಿದೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ.ಶರಣ್ ಜೆ. ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News