​ಉಪ್ಪಿನಂಗಡಿ: 'ಮುಕ್ರಿ ಕುಟುಂಬ ಸಮ್ಮಿಲನ’ ಉದ್ಘಾಟನೆ

Update: 2020-02-26 08:51 GMT

ಉಪ್ಪಿನಂಗಡಿ, ಫೆ.26: ಇಲ್ಲಿನ ಮುಕ್ರಿ ಮನೆತನದ ಕುಟುಂಬ ಸಮ್ಮಿಲನ ಬುಧವಾರ ಬೆಳಗ್ಗೆ ಉಪ್ಪಿನಂಗಡಿಯ ಎಚ್.ಎಂ. ಆಡಿಟೋರಿಯಂನಲ್ಲಿ ಉದ್ಘಾಟನೆಗೊಂಡಿತು.

ಮುಕ್ರಿ ಸಂತತಿಯ ಹಿರಿಯರಾದ ದಾವೂದ್ ಮುಕ್ರಿ ಅವರು ಮುಕ್ರಿ ಕುಟುಂಬದ ಲೋಗೊವನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಅಭಿನಂಧಿಸಲಾಯಿತು.

ಸುಹೈಲ್ ಮುಕ್ರಿ ಪ್ರಸ್ತಾವನೆಗೈದರು. ಮುಕ್ರಿ ಕುಟುಂಬಸ್ಥ, ಪತ್ರಕರ್ತ ಸಿದ್ದೀಕ್ ನೀರಾಜೆ ಸ್ವಾಗತಿಸಿದರು. ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.

ಉಪ್ಪಿನಂಗಡಿ ಪರಿಸರಕ್ಕೆ ಆಗಮಿಸಿದ ಸಿಮಾಮ್ ಮುಕ್ರಿ ಎಂಬವರ ಕುಟುಂಬ ವೃಕ್ಷವು ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನುಪಮ ಕೊಡುಗೆ ಸಲ್ಲಿಸುತ್ತಾ ಬಂದಿದೆ. ಬದಲಾದ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ದೇಶ ಹಾಗೂ ಹೊರದೇಶಗಳಲ್ಲಿ ನೆಲೆಸಿಕೊಂಡಿದ್ದಾರೆ. ಇವರೆಲ್ಲರನ್ನೂ ಮುಕ್ರಿ ಮನೆತನದಡಿ ಪರಸ್ಪರ ಒಗ್ಗೂಡಿಸುವ ಉದ್ದೇಶದಿಂದ ಈ ‘ಮುಕ್ರಿ ಕುಟುಂಬ ಸಮ್ಮಿಲನ’ ಆಯೋಜಿಸಲಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News