ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆ 2019ಯಲ್ಲಿ ಭಾಗವಹಿಸಿ: ಮಂಗಳೂರು ಬಗ್ಗೆ ಅಭಿಪ್ರಾಯ ತಿಳಿಸಿ

Update: 2020-02-26 11:29 GMT

ಮಂಗಳೂರು, ಫೆ. 26: ನಗರಗಳ ನಾಗರೀಕರಿಗೆ ಸ್ವಚ್ಚ, ಸುಸ್ಥಿರ, ಉತ್ತಮ ಪರಿಸರದ ಸುಲಲಿತ ಜೀವನಕ್ಕಾಗಿ ಯೋಗ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರಕಾರದಿಂದ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಮಂಗಳೂರು ನಾಗರಿಕರಿಗೆ ಇದರಲ್ಲಿ ಭಾಗವಹಿಸಲು ಫೆ. 29ರವರೆಗೆ ಮಾತ್ರ ಅವಕಾಶವಿರುತ್ತದೆ.

ಮಂಗಳೂರು ನಾಗರಿಕರು ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಭಾಗವಹಿಸಿ ಮಂಗಳೂರು ಕುರಿತು ಅಭಿಪ್ರಾಯ ತಿಳಿಸುವ ಮೂಲಕ ನಗರಗಳ ಯೋಜನೆ ಮತ್ತು ನಿರ್ವಹಣೆಗೆ ಉತ್ತಮ ಯೋಜನೆ ರೂಪಿಸುವಲ್ಲಿ ಭಾಗಿದಾರರಾಗುವಂತೆ ಮಂಗಳೂರು ಸ್ಮಾಟ್ ಸಿಟಿ ಲಿಮಿಟೆಡ್ ಪ್ರಕಟನೆಯಲ್ಲಿ ತಿಳಿಸಿದೆ.

ಟ್ವಿಟ್ಟರ್ ಮತ್ತು ಫೇಸ್‌ಬುಕ್‌: SmartCitiesMission @easeofliving2019 ನಲ್ಲಿ ಅಭಿಪ್ರಾಯವನ್ನು ಹಂಚಿಕೊಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ www.mangalurusmartcity.net ದೂರವಾಣಿ 0824-2986321 ಗೆ ಸಂಪರ್ಕಿಸಬಹುದು.

ಈ ಸಮೀಕ್ಷೆಯಲ್ಲಿ ಈವರೆಗೆ ಕರ್ನಾಟಕ ರಾಜ್ಯದ ಏಳು ನಗರಗಳಲ್ಲಿ ಮಂಗಳೂರು ಐದನೆ ಸ್ಥಾನದಲ್ಲಿದೆ. ಈವರೆಗೆ ಮಂಗಳೂರು ನಗರದಲ್ಲಿ 7189 ಮಂದಿ ಭಾಗವಹಿಸಿದ್ದರೆ, ಬೆಂಗಳೂರು ನಗರದಲ್ಲಿ 45688 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News