ಬ್ಲಾಕ್ ಆದ ಮನೆಗಳ ಕಾಮಗಾರಿ ಆರಂಭಿಸಲು ಅವಕಾಶ: ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೆಹ್ಲೋಟ್

Update: 2020-02-26 16:59 GMT

ಉಡುಪಿ, ಫೆ.26: ಉಡುಪಿ ಜಿಲ್ಲೆಯ ವಿವಿಧ ಶ್ರೇಣಿಗಳ ಬಸವ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಹಾಗೂ ದೇವರಾಜ್ ಅರಸು ವಸತಿ ಯೋಜನೆಗಳಡಿ ಈಗಾಗಲೇ ಮನೆ ಕಾಮಗಾರಿ ಗಳನ್ನು ನಿಗದಿತ ಅವಧಿಯೊಳಗೆ ಆರಂಭಿಸದೆ ಇರುವುದರಿಂದ ಬ್ಲಾಕ್ ಮಾಡಲಾಗಿದೆ.

ಇದೀಗ ಸರಕಾರದಿಂದ ಬ್ಲಾಕ್ ಆದ ಮನೆಗಳನ್ನು ಪ್ರಾರಂಭಿಸಲು ಒಂದು ಬಾರಿ ಅವಕಾಶ ನೀಡಿದ್ದು, ಫಲಾನುಭವಿಗಳು ಮನೆಯ ಕಾಮಗಾರಿಯನ್ನು ಪ್ರಾರಂಭಿಸಿ, ಮಾರ್ಚ್ 14ರ ಒಳಗೆ ಪ್ರಗತಿಯನ್ನು ಜಿಪಿಎಸ್‌ಗೆ ಅಳವಡಿಸಲು ಸೂಚಿಸಿದೆ. ಇಲ್ಲವಾದಲ್ಲಿ ಅಂತಹ ಮನೆಗಳು ಶಾಶ್ವತವಾಗಿ ರದ್ದಾಗುವುದೆಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News