ಫೆ.27ರಿಂದ ಆರ್ಕಿಹೋಲಿಕ್ಸ್ ಫೆಸ್ಟ್

Update: 2020-02-26 17:35 GMT

ಮಂಗಳೂರು, ಫೆ.26: ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಳಚ್ಚಿಲ್‌ನಲ್ಲಿರುವ ಶ್ರಿನಿವಾಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ವತಿಯಿಂದ ಫೆ.27ರಿಂದ 29ರವರೆಗೆ ಆರ್ಕಿಹೋಲಿಕ್ಸ್ ಫೆಸ್ಟ್ ಆಯೋಜಿಸಲಿದೆ.

ಫೆ.27 ಮತ್ತು 28ರಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ವಿನ್ಯಾಸ ನಡೆಯಲಿದೆ. ಫೆ.29ರಂದು ಸಂಜೆ 4ಕ್ಕೆ ಬಿಗ್‌ಸಿನಿಮಾದಲ್ಲಿ ಸಂಜೆ 4 ಗಂಟೆಗೆ ವಾಸ್ತುಶಿಲ್ಪಿ ಕ್ರಿಸ್ಟೋಫರ್ ಬೆನ್ನಿಂಜರ್ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದವನ್ನು ನಡೆಸಲಿದ್ದಾರೆ. ಈ ಸಂವಾದದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News