ಬೋಂದೇಲ್: ತಾಯಿ-ಮಗು ನಾಪತ್ತೆ

Update: 2020-02-26 17:47 GMT

ಮಂಗಳೂರು, ಫೆ.26: ನಗರದ ಬೋಂದೇಲ್‌ನ ಮನೆಯಿಂದ ತಾಯಿ ಮಗು ನಾಪತ್ತೆಯಾದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

ರೊನುಸುಬೇದಿ (31) ಎಂಬವರು ತನ್ನ 8 ತಿಂಗಳ ಮಗು ಪ್ರೀಯಾಜೀತ್ ಮಜುಂದೂರ್‌ನನ್ನು ಕರೆದುಕೊಂಡು ಹೋಗಿದ್ದು, ಈವರೆಗೆ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರೋನುಸುಬೇದಿ 5 ಅಡಿ ಎತ್ತರವಿದ್ದು, ಬಿಳಿ ಮೈ ಬಣ್ಣ, ದೃಢಕಾಯ ಶರೀರ ಹೊಂದಿದ್ದಾರೆ. ಅಸ್ಸಾಮಿ, ಬೆಂಗಾಲಿ, ಹಿಂದಿ ಮಾತನಾಡುತ್ತಾರೆ. ಈ ತಾಯಿ ಮತ್ತು ಮಗುವನ್ನು ಕಂಡವರು ಪಣಂಬೂರು ಪೊಲೀಸ್ ಠಾಣೆಯನ್ನು (ದೂ.ಸಂ:0824-2220530, 9480805355, 9480805331)ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News