ರಾಜ್ಯದ ರೈತರಿಗೆ ಅನುಕೂಲವಾಗುವಂತೆ ಹೊಸ ಯೋಜನೆ ರೂಪಿಸಲು ಚಿಂತನೆ: ಸಚಿವ ಎಸ್.ಟಿ ಸೋಮಶೇಖರ್

Update: 2020-02-26 18:36 GMT

ಬೆಳ್ತಂಗಡಿ: ಮುಖ್ಯಮಂತ್ರಿಗಳು ಈಗಾಗಲೇ ರೈತರಿಗೆ ಅನುಕೂಲವಾಗುವಂತೆ 466ಕೋಟಿ ರೂ ಬಡ್ಡಿ ಮನ್ನ ಮಾಡಿದ್ದು ರೈತರಿಗೆ ಬೆಂಬಲವಾಗಿದ್ದಾರೆ. ಇದೇ ರೀತಿ ಅಧಿವೇಶನದ ಬಳಿಕ ರಾಜ್ಯದ ರೈತರಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹೊಸ ಯೋಜನೆ ರೂಪಿಸಲು ಚಿಂತಿಸಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಅವರು ಬುಧವಾರ ಕೃಷಿ ಮಾರುಕಟ್ಟೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಳ್ತಂಗಡಿ ಇದರ ಆಶ್ರಯದಲ್ಲಿ 3.18 ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಹಾಗೂ ಶಿಲಾನ್ಯಾಸ ಸಮಾರಂಭ ಮತ್ತು ರೈತ ಸಮಾವೇಶ, ವರ್ತಕರ ಸಮಾವೇಶ, ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಕೃಷಿ ಮೇಳ, ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ ಈ ಬಗ್ಗೆ ಎಲ್ಲಾ ಹಿರಿಯರನ್ನು ಒಟ್ಟು ಸೇರಿಸಿ ಅವರ ಅಭಿಪ್ರಾಯವನ್ನು ಪಡೆದು ಯೋಜನೆ ರೂಪಿಸಲಾಗುವುದು. ಅಲ್ಲದೆ ಕರಾವಳಿ ಭಾಗದಿಂದ ಅಡಿಕೆ ಕೊಳೆರೋಗಕ್ಕೆ ಪರಿಹಾರ ನೀಡುವ ಬಗ್ಗೆಯೂ ಗಮನಕ್ಕೆ ಬಂದಿದ್ದು, ಇದರ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂದಿಸಿದಂತೆ ಇಲ್ಲಿನ ಶಾಸಕರು ಮತ್ತುಅಧ್ಯಕ್ಷರು, ಹಲವಾರು ಬೇಡಿಕೆಗಳನ್ನು ಇಟ್ಟಿದ್ದು ಇದನ್ನು ಮುಂದಿನ ನಾಲ್ಕು ದಿನದ ಒಳಗೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.

ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿಕೃಷಿಕರಿಗೆ ಅನುಕೂಲವಾಗುವಂತಹ ಯೋಜನೆಗಳು ಕೃಷಿ ಮಾರುಕಟ್ಟೆಯಲ್ಲಿ ಇನ್ನಷ್ಟು ಅನುಷ್ಠಾನವಾಗಬೇಕು ಈ ಮೂಲಕ ರೈತರ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದರು.

ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಇತಿಹಾಸದಲ್ಲೆ ಕೃಷಿ ಬಜೆಟ್ ಮಂಡಿಸಿ ಹೆಗ್ಗಳಿಕೆಗೆ ಪಾತ್ರವಾದ ಮುಖ್ಯಮಂತ್ರಿ ಯೆಡಿಯೂರಪ್ಪನವರಿಂದ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತಿದೆ. ಯುವಕರು ಕೃಷಿಯತ್ತ ಒಲವು ತೋರಿಸಬೇಕಾದರೆ ಕೃಷಿ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸಚಿವರು ರೈತರಿಗೆ ಅನುಕೂಲವಾಗುವಂತಹ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.

ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೆಚ್.ಎಸ್ ಅಶೋಕ್‍ಕುಮಾರ್, ಕಾರ್ಯದರ್ಶಿ ಎಸ್‍ರವೀಂದ್ರ, ಉಪಾಧ್ಯಕ್ಷ ಅಬ್ದುಲ್‍ಗಫೂರ್, ಹಾಗೂ ಸಮಿತಿಯ ಸದಸ್ಯರುಗಳಾದ ಸತೀಶ್ ಕೆ, ಆನಂದ ನಾಯ್ಕ, ಸೆಲೆಸ್ಟಿನ್ ಡಿ’ಸೋಜಾ, ಪಲ್ಲವಿ, ಈಶ್ವರ ಬೈರ, ಅಶೋಕ್‍ಗೋವಿಯಸ್, ಚಿದಾನಂದ ಪೂಜಾರಿ, ಎ.ಪಿಎಂ.ಸಿ ಮಾಜಿಅಧ್ಯಕ್ಷಗಣೇಶ್ ಪ್ರಸಾದ್,ಉಪನಿರ್ದೇಸಕ ಶ್ರೀನಿವಾಸ್, ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಅಧ್ಯಕ್ಷ ಹಾಗೂ  ಕರ್ನಾಟಕರಾಜ್ಯ ಮಾರಾಟ ಮಂಡಳಿ ಬೆಂಗಳೂರು ಇದರ ಸದಸ್ಯ ಕೆ. ಪದ್ಮನಾಭರೈ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಜಯನಂದಗೌಡ ಪ್ರಜ್ವಲ್, ತಹಶಿಲ್ದಾರ್ ಗಣಪತಿ ಶಾಸ್ತ್ರಿ, ಕಾರ್ಕಳ ಎ.ಪಿ.ಎಂ.ಸಿ ಅಧ್ಯಕ್ಷಜಯವರ್ಮ, ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪ್ರವೀಣ್‍ಕುಮಾರ್‍ಎಸ್, ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಅಧ್ಯಕ್ಷ ದೀಪಕ್, ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಅಧ್ಯಕ್ಷ ದಿನೇಶ್ ಮೆದು, ಉಪಸ್ಥಿತರಿದ್ದರು.

ಪ್ರಜ್ಞ ಓಡಿಲ್ನಾಳ, ಸ್ವಾತಿ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಸತೀಶ್ ಕೆ.ಕಾಶಿಪಟ್ಣ ವಂದಿಸಿದರು. 

ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆಗೈದ ಬಿ.ಕೆ ರಾವ್ ಮಿತ್ತಬಾಗಿಲು, ಪ್ರಭಾಕರ್ ಮಯ್ಯ ನಡ, ಸುಲೈಮಾನ್ ಬೆಳಾಲು, ಚಂದ್ರಹಾಸಗೌಡ ನಡ, ಮತ್ತು ಸತೀಶ್ ಕಾಶಿಪಟ್ಣ, ಗುತ್ತಿಗೆದಾರ ಜಯಕುಮಾರ್ ಇವರನ್ನು ಸನ್ಮಾನಿಸಲಾಯಿತು. ಸಚಿವರನ್ನು ಹಾಗೂ ಶಾಸಕರನ್ನು ಎಪಿಎಂಸಿ ವತಿಯಿಂದ ಕೇಶವ ಗೌಡ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News