ದೆಹಲಿ ಹಿಂಸಾಚಾರಕ್ಕೆ ಖಂಡನೆ: ಎಸ್ಸೆಸ್ಸೆಫ್ ನಿಂದ ಫೆ.28ರಂದ ರಾಜ್ಯಾದ್ಯಂತ ಭಿತ್ತಿಪತ್ರ ಪ್ರದರ್ಶನ

Update: 2020-02-27 07:10 GMT

ಮಂಗಳೂರು, ಫೆ.27: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಜಾತ್ಯತೀತ ಪರಂಪರೆಗೆ ಅವಮಾನವಾಗಿದ್ದು ಕೇಂದ್ರ ಸರಕಾರ ಹಾಗೂ ಗೃಹಸಚಿವರು ಇದರ ವಿರುದ್ಧ ತುಟಿಬಿಚ್ಚದೆ ಗಾಢ ನಿದ್ರೆಯಲ್ಲಿರುವುದು ಸಂಶಯಾಸ್ಪದವಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಿಟಿಎಂ ಉಮರ್ ಅಸ್ಸಖಾಫ್ ಮದನಿ ತೀವ್ರವಾಗಿ ಖಂಡಿಸಿದರು.

ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಷಡ್ಯಂತ್ರದ ವಿರುದ್ಧ ರಾಜ್ಯಾದ್ಯಂತ ಎಲ್ಲಾ ಯುನಿಟ್ ಕೇಂದ್ರಗಳಲ್ಲಿ ಫೆ.28ರಂದು ಜುಮಾ ನಮಾಝ್ ಬಳಿಕ ಭಿತ್ತಿಪತ್ರ ಪ್ರದರ್ಶನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News