'ಮುಸ್ಲಿಂ ಸೋದರರು ನನ್ನ ರಕ್ಷಣೆಗೆ ನಿಂತಿದ್ದಾರೆ': ಹಿಂಸಾಚಾರದ ನಡುವೆ ನಡೆದ ತನ್ನ ವಿವಾಹದ ಬಗ್ಗೆ ಸಾವಿತ್ರಿ

Update: 2020-02-28 13:21 GMT
Photo: (Reuters)

ಹೊಸದಿಲ್ಲಿ: ಈಶಾನ್ಯ ದಿಲ್ಲಿಯ ಹಲವೆಡೆ ಮಂಗಳವಾರ ನಡೆದ ಭೀಕರ ಹಿಂಸಾಚಾರದಿಂದ ಆ ದಿನ ನಡೆಯಬೇಕಿದ್ದ 23 ವರ್ಷದ ಸಾವಿತ್ರಿ ಪ್ರಸಾದ್ ವಿವಾಹವನ್ನು ಅನಿವಾರ್ಯವಾಗಿ ರದ್ದುಪಡಿಸಬೇಕಾಯಿತು. ತನ್ನ ಮನೆಯ ಹೊರಗೆ ನಡೆಯುತ್ತಿದ್ದ ಹಿಂಸಾಚಾರ ಘಟನೆಗಳಿಂದ ಕಂಗಾಲಾಗಿದ್ದ ಸಾವಿತ್ರಿ ಕಣ್ಣೀರು ಹರಿಸಿದ್ದರು. ಆಕೆಯ ನೆರೆಹೊರೆಯ ಮುಸ್ಲಿಮರು ತಾವಿದ್ದೇವೆ ಎಂದು ಧೈರ್ಯ ತುಂಬಿದ ಕಾರಣ ಆಕೆಯ ತಂದೆ ವಿವಾಹವನ್ನು ಮರುದಿನಕ್ಕೆ ನಿಗದಿಪಡಿಸಿದ್ದರು.

"ನನ್ನ ಮುಸ್ಲಿಂ ಸೋದರರು ಇಂದು ನನ್ನ ರಕ್ಷಣೆಗೆ ನಿಂತಿದ್ದಾರೆ'' ಎಂದು ವಿವಾಹದ ದಿನ ಭೇಟಿಯಾದ ಸುದ್ದಿಸಂಸ್ಥೆಯ ಪ್ರತಿನಿಧಿ ಜತೆ ಆಕೆ ಹೇಳುತ್ತಾ ಮತ್ತೆ ಕಣ್ಣೀರು ಹರಿಸಿದಳು.

ಚಾಂದ್ ಬಾಗ್ ಜಿಲ್ಲೆಯ ಸಣ್ಣ ಗಲ್ಲಿಯೊಂದರಲ್ಲಿನ ಪುಟ್ಟ ಮನೆಯಲ್ಲಿ ಆಕೆಯ ವಿವಾಹ ನಡೆದಾಗ  ಅಲ್ಲೇ ಹತ್ತಿರದ ಮುಖ್ಯ ರಸ್ತೆ ಯುದ್ಧರಂಗದಂತಿತ್ತು.

ಆದರೆ ಸಾವಿತ್ರಿಯ ವಿವಾಹ ಸಮಾರಂಭದಲ್ಲಿ ಹಿಂದು-ಮುಸ್ಲಿಮರು ಜತೆಗೂಡಿ ಶ್ರಮಿಸಿ ಧಾರ್ಮಿಕ ಸಾಮರಸ್ಯ ಮೆರೆದರು. "ನನ್ನ ಪುತ್ರಿಯ ವಿವಾಹಕ್ಕೆ ಸಂಬಂಧಿಕರು ಯಾರೂ  ಬಂದಿಲ್ಲ. ಆದರೆ ನಮ್ಮ ನೆರೆಹೊರೆಯ ಮುಸ್ಲಿಮರು ನಮ್ಮ ಜತೆಗಿದ್ದಾರೆ, ಅವರೇ ನಮ್ಮ ಕುಟುಂಬ'' ಎಂದು ಸಾವಿತ್ರಿಯ ತಂದೆ ಭೋದೆ ಪ್ರಸಾದ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News