ಪೌರತ್ವ ಕಾಯ್ದೆ ವಿರುದ್ಧ ಪ್ರಚಾರ ಆರೋಪ: ಟ್ವಿಟ್ಟರ್, ವಾಟ್ಸ್‌ಆ್ಯಪ್, ಟಿಕ್‌ಟಾಕ್ ವಿರುದ್ಧ ಪ್ರಕರಣ ದಾಖಲು

Update: 2020-02-28 17:27 GMT

ಹೈದರಾಬಾದ್, ಫೆ. 28: ತನ್ನ ವೇದಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಅಂಶಗಳ ಪ್ರಚಾರಕ್ಕೆ ಅವಕಾಶ ನೀಡಿದೆ ಎನ್ನಲಾದ ಟ್ವಿಟ್ಟರ್, ವಾಟ್ಸ್‌ಆ್ಯಪ್ ಹಾಗೂ ಟಿಕ್‌ಟಾಕ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೈದರಾಬಾದ್‌ನ 12ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬಳಿಕ ಕೆಲವು ಸಮಾಜ ವಿರೋಧಿ ಶಕ್ತಿಗಳು ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜಿಕ ಜಾಲ ತಾಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಭಿಯಾನ ಪ್ರಾರಂಭಿಸಿವೆ. ದೇಶದಾದ್ಯಂತ ಜಾರಿಗೆ ತರಲು ಪ್ರಸ್ತಾಪಿಸಲಾದ ರಾಷ್ಟ್ರೀಯ ಪೌರತ್ವ ನೋಂದಣಿಯೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿಲೀನಗೊಳಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ 42 ವರ್ಷದ ಶ್ರೀಶೈಲಂ ಅವರು ದೂರು ದಾಖಲಿಸಿದ್ದರು.

ಸಮಾಜ ವಿರೋಧಿ ಶಕ್ತಿಗಳು ಟ್ವಿಟ್ಟರ್, ವ್ಯಾಟ್ಸ್ ಆ್ಯಪ್ ಟಿಕ್‌ಟಾಕ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಅಲ್ಲದೆ, ಅಂಶವನ್ನು ಪರಿಶೀಲಿಸದೆ ದೊಡ್ಡ ಸಂಖ್ಯೆಯ ವೀಡಿಯೊ ಹಾಗೂ ಸಂದೇಶವನ್ನು ಹರಡಲು ಸಮಾಜ ವಿರೋಧಿ ಶಕ್ತಿಗಳೊಂದಿಗೆ ಈ ವೇದಿಕೆ ಕೈಜೋಡಿಸಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News