ವಿಮಾನದೊಳಗೆ ಅಪರೂಪದ ಅತಿಥಿ;ಹಿಡಿಯಲು ಯತ್ನಿಸಿದ ಪ್ರಯಾಣಿಕರು

Update: 2020-02-29 08:00 GMT

ಹೊಸದಿಲ್ಲಿ, ಫೆ.29: ಅತ್ಯಂತ ಅಪರೂಪದ ಘಟನೆಯೊಂದರಲ್ಲಿ ಅಹ್ಮದಾಬಾದ್‌ನಿಂದ ಜೈಪುರಕ್ಕೆ ಹೊರಟಿದ್ದ ಗೋ ಏರ್ ವಿಮಾನದೊಳಗೆ ಪಾರಿವಾಳವೊಂದು ಪ್ರವೇಶಿಸಿದ ಪರಿಣಾಮ ವಿಮಾನದ ಹಾರಾಟ 30 ನಿಮಿಷ ವಿಳಂಬವಾಗಿದೆ. ವಿಮಾನ ಟೇ-ಆಫ್ ಆಗುವ ಸಿದ್ಧತೆಯಲ್ಲಿದ್ದಾಗ ಕ್ಯಾಬಿನ್‌ನೊಳಗೆ ಪಾರಿವಾಳ ಕಾಣಿಸಿಕೊಂಡಿತು.

ಪಾರಿವಾಳ ವಿಮಾನದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹಾರಾಡುತ್ತಿದ್ದು, ವಿಮಾನದ ಪ್ರಯಾಣಿಕರು ನಗುತ್ತಾ, ವೀಡಿಯೊವನ್ನು ಸೆರೆ ಹಿಡಿದರು. ಕೆಲವು ಪ್ರಯಾಣಿಕರು ಪಾರಿವಾಳವನ್ನು ಹಿಡಿಯಲು ಯತ್ನಿಸಿದ್ದು, ಕ್ಯಾಬಿನ್ ಸಿಬ್ಬಂದಿ ನೆರವು ಕೇಳಿದರು. ಆದರೆ ಪಾರಿವಾಳ ಯಾರ ಕೈಗೂ ಸಿಗಲಿಲ್ಲ. ಕೊನೆಗೂ ಪಾರಿವಾಳ ವಿಮಾನದ ಒಂದು ಬಾಗಿಲಿನಿಂದ ಹೊರಗೆ ಹಾರಿ ಹೋಯಿತು. ರಾತ್ರಿ 6:15ಕ್ಕೆ ಜೈಪುರಕ್ಕೆ ತಲುಪಬೇಕಾಗಿದ್ದ ವಿಮಾನ ಸಂಜೆ 6:45ಕ್ಕೆ ತಲುಪಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News