ಮಧ್ಯಪ್ರದೇಶದಲ್ಲಿ ಸರಕು ರೈಲುಗಳ ಢಿಕ್ಕಿ : 3 ಸಾವು
Update: 2020-03-01 12:57 IST
ಭೋಪಾಲ್ , ಮಾ.1: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಗ್ರಾಮವೊಂದರಲ್ಲಿ ರವಿವಾರ ಮುಂಜಾನೆ ಎರಡು ಸರಕು ರೈಲುಗಳು ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದಾರೆ
ಬೋಪಾಲ್ ನಿಂದ ಏಳು ಕಿ.ಮೀ ದೂರದಲ್ಲಿರುವ ಘನ್ಹಾರಿ ಗ್ರಾಮದ ಬಳಿ ಖಾಲಿ ಸರಕು ರೈಲಿಗೆ ಮಧ್ಯಪ್ರದೇಶದ ಅಮ್ಲೋರಿ ಗಣಿ ಯಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಕಲ್ಲಿದ್ದಲು ತುಂಬಿದ ರೈಲು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಸಿಂಗ್ರೌಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶೆಂಡೆ ತಿಳಿಸಿದ್ದಾರೆ.
ಘರ್ಷಣೆಯ ನಂತರ ಒಂದು ರೈಲಿನ ಹದಿಮೂರು ವ್ಯಾಗನ್‌ಗಳು ಮತ್ತು ಎಂಜಿನ್ ಹಳಿ ತಪ್ಪಿ ಪಕ್ಕಕ್ಕೆ ಉರುಳಿ ಬಿದ್ದಿದೆ.
ಈವರೆಗೆ ರೈಲು ಎಂಜಿನ್‌ನಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು ಇನ್ನೂ ಗುರುತಿಸಲಾಗಿಲ್ಲ, ಮೃತಪಟ್ಟವರು ಇಬ್ಬರು ಚಾಲಕರು ಮತ್ತು ಪಾಯಿಂಟ್‌ಮ್ಯಾನ್‌ನದ್ದಾಗಿರಬಹುದು ಎಂದು ಅವರು ಹೇಳಿದರು.