ಸಿಎಎ ಯಾರ ಪೌರತ್ವವನ್ನೂ ಕಸಿಯದು: ಅಮಿತ್ ಶಾ

Update: 2020-03-01 15:31 GMT

ಕೋಲ್ಕತಾ, ಫೆ.1: ದೇಶದ ನಿರಾಶ್ರಿತರಿಗೆ ಸಿಎಎ ಅಡಿ ಪೌರತ್ವವನ್ನು ಒದಗಿಸುವುದನ್ನು ಮೋದಿ ಸರಕಾರವು ನಿಲ್ಲಿಸದು ಎಂದು ಅಮಿತ್ ಶಾ ಕೋಲ್ಕತಾದಲ್ಲಿ ಇಂದು ನಡೆದ ಬಿಜೆಪಿ ರ್ಯಾಲಿಯಲ್ಲಿ ಘೋಷಿಸಿದರು.

 2021ರಲ್ಲಿ ನಡೆಯಲಿರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮೂರನೆ ಎರಡರಷ್ಟು ಬಹುಮತ ಪಡೆದು ಅಧಿಕಾರಕ್ಕೇರಲಿದೆಯೆದಂು ಅಮಿತ್ ಶಾ ಹೇಳಿದರು.

 “ಟಿಎಂಸಿ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ಸಿಎಎ ಬಗ್ಗೆ ನಿರಾಶ್ರಿತರನ್ನು ಹಾಗೂ ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆಳೆಯುತ್ತಿವೆ ಎಂದು ಶಾ ಆರೋಪಿಸಿದರು. ಸಿಎಎ ಯಿಂದಾಗಿ ಒಬ್ಬನೇ ಒಬ್ಬ ವ್ಯಕ್ತಿಯು ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ” ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.ಎಲ್ಲಾ ನಿರಾಶ್ರಿತರಿಗೆ ಪೌರತ್ವ ದೊರೆಯುವ ತನಕ ನಾವು ವಿರಮಿಸುವುದಿಲ್ಲ’’ ಎಂದವರು ಹೇಳಿದರು.

 ರ್ಯಾಲಿಯಲ್ಲಿ ಶಾ ಅವರು ಬಿಜೆಪಿಯ ‘ಆರ್ ನೊಯಿ ಅನ್ಯಾಯ್’ ( ಇನ್ನು ಅನ್ಯಾಯ ವಿಲ್ಲ) ಅಭಿಯಾನಕ್ಕೆ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News