ದಿಲ್ಲಿ ಹಿಂಸಾಚಾರ ಸಂತ್ರಸ್ತರಿಗೆ ಆಶ್ರಯ ನೀಡುತ್ತೇವೆ: ಆಡಳಿತಕ್ಕೆ ಜೆಎನ್ ಯು ವಿದ್ಯಾರ್ಥಿ ಸಂಘದ ತಿರುಗೇಟು

Update: 2020-03-01 16:41 GMT
ಫೈಲ್ ಚಿತ್ರ

ಹೊಸದಿಲ್ಲಿ, ಮಾ.1: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಸಂತ್ರಸ್ತರಿಗೆ ಜೆಎನ್‌ ಯು ಆವರಣದಲ್ಲಿ ಆಶ್ರಯ ನೀಡಬಾರದು ಎಂದು ಆಡಳಿತವರ್ಗ ಎಚ್ಚರಿಕೆ ನೀಡಿರುವ ಹೊರತಾಗಿಯೂ, ಸಂತ್ರಸ್ತರಿಗೆ ಜೆಎನ್‌ ಯು ಕ್ಯಾಂಪಸ್‌ನಲ್ಲಿ ಆಶ್ರಯ ಮುಂದುವರಿಯಲಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘ ಹೇಳಿದೆ.

 ಮಾನವೀಯತೆಯು ಆಡಳಿತಾತ್ಮಕ ಬೆದರಿಕೆಯನ್ನು ಮೀರಿಸುತ್ತದೆ. ಜೆಎನ್‌ಯು 1984ರ ಗಲಭೆಯ ಸಂದರ್ಭವೂ ಆಶ್ರಯ ಒದಗಿಸಿತ್ತು ಮತ್ತು ಈಗಲೂ ಆಶ್ರಯ ಒದಗಿಸುತ್ತದೆ. ಸರಕಾರದ ದಬ್ಬಾಳಿಕೆಯಿಂದ ಸಂತ್ರಸ್ತರಾದವರಿಗೆ ಜೆಎನ್‌ಯು ಯಾವಾಗಲೂ ಆಶ್ರಯ ನೀಡುತ್ತದೆ . ಸಂತ್ರಸ್ತರಿಗೆ ಜೆಎನ್‌ಯು ಸುರಕ್ಷಿತ ಆಶ್ರಯತಾಣವಾಗಿದೆ ಎಂದು ವಿದ್ಯಾರ್ಥಿ ಸಂಘ ತಿಳಿಸಿದೆ.

ಜೆಎನ್‌ಯು ಆವರಣವನ್ನು ಆಶ್ರಯತಾಣವಾಗಿಸಲು ಜೆಎನ್‌ಯು ವಿದ್ಯಾರ್ಥಿ ಸಂಘ(ಜೆಎನ್‌ಎಸ್‌ಯು)ಕ್ಕೆ ಯಾವುದೇ ನ್ಯಾಯಸಮ್ಮತ ಹಕ್ಕು ಇಲ್ಲ. ಯಾವುದೇ ವಿದ್ಯಾರ್ಥಿ ಇಂತಹ ಪ್ರಯತ್ನಗಳಲ್ಲಿ ಶಾಮೀಲಾಗಿರುವುದು ಕಂಡುಬಂದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜೆಎನ್‌ಯು ರಿಜಿಸ್ಟ್ರಾರ್ ಪ್ರಮೋದ್ ಕುಮಾರ್ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News