×
Ad

ಬಾಲಕಿಯ ಅತ್ಯಾಚಾರ, ಕೊಲೆಗೈದು ಮೃತದೇಹ ಮರಕ್ಕೆ ನೇತು ಹಾಕಿದ 7 ವಿದ್ಯಾರ್ಥಿಗಳು

Update: 2020-03-02 15:44 IST

ತೇಝ್‍ ಪುರ್: ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಚಕ್ಲ ಎಂಬ ಗ್ರಾಮದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ  ಆಕೆಯನ್ನು ಕೊಲೆಗೈದು ಮೃತದೇಹವನ್ನು ಮರವೊಂದಕ್ಕೆ ನೇತು ಹಾಕಿದ ಆರೋಪದ ಮೇಲೆ ಏಳು ಮಂದಿ ಬಾಲಕರನ್ನು ಬಂಧಿಸಲಾಗಿದೆ.

ಎಲ್ಲಾ ಆರೋಪಿಗಳೂ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾದವರಾಗಿದ್ದಾರೆ.

ಘಟನೆ ಕಳೆದ ಶುಕ್ರವಾರ ಗೋಹ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ವಿದ್ಯಾರ್ಥಿಗಳೆಲ್ಲರನ್ನೂ ರವಿವಾರ ಬಂಧಿಸಲಾಯಿತು. ಪರೀಕ್ಷೆ ಮುಗಿದ ನಂತರ ಆರೋಪಿ ಬಾಲಕರು ಸಂತ್ರಸ್ತೆಯನ್ನು ಪಾರ್ಟಿ ಇದೆ ಎಂದು ಹೇಳಿ ಮನೆಯೊಂದಕ್ಕೆ ಆಹ್ವಾನಿಸಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿಯೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ನಂತರ ಆ ಮನೆಯ ಸಮೀಪದ ಮರವೊಂದಕ್ಕೆ ಆಕೆಯನ್ನು ನೇತು ಹಾಕಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯ ಶವ ಶನಿವಾರ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News