ಫೆಬ್ರವರಿಯಲ್ಲಿ ನಿರುದ್ಯೋಗ ಪ್ರಮಾಣ ಶೇ 7.78ಕ್ಕೇರಿಕೆ, 4 ತಿಂಗಳಲ್ಲೇ ಗರಿಷ್ಠ

Update: 2020-03-02 11:24 GMT

ಹೊಸದಿಲ್ಲಿ: ಭಾರತದ ನಿರುದ್ಯೋಗ ಪ್ರಮಾಣ ಫೆಬ್ರವರಿ ತಿಂಗಳಲ್ಲಿ ಶೇ 7.78ಗೆ ಏರಿಕೆಯಾಗಿದ್ದು, ಅಕ್ಟೋಬರ್ 2019ರಿಂದೀಚೆಗೆ ಇದು ಗರಿಷ್ಠ ನಿರುದ್ಯೋಗ ಪ್ರಮಾಣವಾಗಿದೆ. 

ಈ ವರ್ಷದ ಜನವರಿಯಲ್ಲಿನ ನಿರುದ್ಯೋಗ ಪ್ರಮಾಣ ಶೇ 7.16ರಷ್ಟಾಗಿತ್ತು ಎಂದು ಮುಂಬೈ ಮೂಲದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ಸೋಮವಾರ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ. ಫೆಬ್ರವರಿಯಲ್ಲಿನ ನಿರುದ್ಯೋಗ ಪ್ರಮಾಣ ಜನವರಿ ತಿಂಗಳ ಪ್ರಮಾಣಕ್ಕಿಂತಲೂ ಹೆಚ್ಚಾಗಿರುವುದು ದೇಶದ ಆರ್ಥಿಕತೆಯ ನಿಧಾನಗತಿಯನ್ನು ಸೂಚಿಸುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಜನವರಿಯಲ್ಲಿ ಶೇ 5.97 ಆಗಿದ್ದರೆ ಫೆಬ್ರವರಿಯಲ್ಲಿ ಈ ಪ್ರಮಾಣ ಶೇ 7.37ರಷ್ಟು ಏರಿಕೆಯಾಗಿದೆ. ನಗರ ಪ್ರದೇಶಗಳಲ್ಲಿ ಈ ಎರಡು ತಿಂಗಳುಗಳಲ್ಲಿನ ನಿರುದ್ಯೋಗ ಪ್ರಮಾಣ ಕ್ರಮವಾಗಿ ಶೇ 8.65 ಹಾಗೂ ಶೇ 9.70 ಆಗಿದೆ ಎಂದು ಸಿಎಂಐಇ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News